Saturday, May 28, 2022
Powertv Logo
Homeವಿದೇಶಬ್ಯಾಟಿಂಗ್ ವೇಳೆ ಕನ್ನಡದಲ್ಲೇ ಮಾತನಾಡಿದ ರಾಹುಲ್ , ಮನೀಷ್ ಪಾಂಡೆ..!

ಬ್ಯಾಟಿಂಗ್ ವೇಳೆ ಕನ್ನಡದಲ್ಲೇ ಮಾತನಾಡಿದ ರಾಹುಲ್ , ಮನೀಷ್ ಪಾಂಡೆ..!

ಮೌಂಟ್ ಮಾಂಗ್ನುಯಿ : ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರೋ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಕನ್ನಡದಲ್ಲಿ ಮಾತನಾಡಿದ್ದಾರೆ. ಶತಕದ ಜೊತೆಯಾಟದಲ್ಲಿ ಭಾಗಿಯಾದ ಇವರಿಬ್ಬರು ರನ್ ಕದಿಯುವಾಗ ಪರಸ್ಪರ ಕನ್ನಡದಲ್ಲಿ ಮಾತನಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
46ನೇ ಓವರ್​ನ 4ನೇ ಬಾಲ್​​ನ್ನು ಎದುರಿಸಿದ ಮನೀಷ್ ಪಾಂಡೆ ಆಫ್​ ಸೈಡ್​ನತ್ತ ಬಾಲನ್ನು ಬಾರಿಸಿ, ಎರಡು ರನ್​ಗಳಿಸಿದ್ರು. ಆ ವೇಳೆ ‘ಓಡು.. ಓಡು ಮಗ’ ಹಾಗೂ `ಬೇಡ ಬೇಡ’ ಅನ್ನೋ ಕನ್ನಡ ಪದಗಳನ್ನು ಬಳಸಿದ್ದಾರೆ. ಹೀಗೆ ಕನ್ನಡಿಗರು ಅಂತರಾಷ್ಟ್ರೀಯ ಕ್ರಿಕೆಟ್​ ಅಂಗಳದಲ್ಲಿ ಕನ್ನಡ ಮಾತನಾಡಿರೋದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಪಂದ್ಯದಲ್ಲಿ ರಾಹುಲ್ ಶತಕ (112) ಸಿಡಿಸಿ ಮಿಂಚಿದ್ದರೆ, ಪಾಂಡೆ 42ರನ್​ ಕೊಡುಗೆ ನೀಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments