ಮಸೂದ್​ನ್ನು ಬಿಡುಗಡೆ ಮಾಡಿದ್ಯಾರು..? ಮೋದಿಗೆ ರಾಹುಲ್​ ಪ್ರಶ್ನೆ

0
216

ಹಾವೇರಿ: ಪ್ರಧಾನಿ ಮೋದಿಯವರೇ ಉಗ್ರ ಮಸೂದ್ ಅಜರ್​ನ್ನು ಜೈಲಿನಿಂದ ಬಿಡುಗಡೆ ಮಾಡಿದ್ಯಾರು ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ಹಾವೇರಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಜೈಲಿನಿಂದ ಮಸೂದ್​​ನ್ನು ಬಿಡುಗಡೆ ಮಾಡಿದ್ಯಾರು ಅನ್ನೋದಕ್ಕೆ ಪ್ರಧಾನಿ ಮೋದಿ ಉತ್ತರಿಸ್ಬೇಕು. 1999ರಲ್ಲಿ ಬಿಜೆಪಿ ಸರ್ಕಾರ ಭಾರತದ ಜೈಲಿನಲ್ಲಿದ್ದ ಮಸೂದ್​ನ್ನು ಅಫ್ಘಾನಿಸ್ತಾನದ ಕಂದಹಾರ್​ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿತ್ತು ಅಂತ ಹೇಳಿದ್ದಾರೆ.

“ಮೋದಿ ಸಿಬಿಐ ನಿರ್ದೇಶಕರನ್ನು ರಾತ್ರೋ ರಾತ್ರಿ ಕಿತ್ತುಹಾಕಿದ್ದಾರೆ. ಎಲ್ಲಿ ನೋಡಿದ್ರೂ ಮೋದಿಯ ಬೆಂಬಲಿಗರೇ ತುಂಬಿದ್ದಾರೆ. ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ್ರು. ಪ್ರಧಾನಿಯವರೆ ಹಾಗಾದ್ರೆ ಸಿಆರ್​ಪಿಎಫ್​ ಯೋಧರನ್ನ ಯಾರು ಕೊಂದಿದ್ದಾರೆ?” ಅಂತ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಹಾವೇರಿಯಲ್ಲಿ ಮೋದಿ ಅವರಿಗೆ ಪ್ರಶ್ನಿಸಿದ್ದಾರೆ.

ಮಸೂದ್ ಅಜರ್​ನನ್ನು ಪಾಕಿಸ್ತಾನಕ್ಕೆ ಕಳಿಸಿದ್ದು ಯಾರು? ಅಂತ  ಪ್ರಧಾನಿ ಮೋದಿಗೆ ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​ ಪರಿವರ್ತನಾ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಕ್​ಪ್ರಹಾರ ನಡೆಸಿದ್ರು.

LEAVE A REPLY

Please enter your comment!
Please enter your name here