ಉಗ್ರನಿಗೆ ರಾಜಗೌರವ ನೀಡಿದ ರಾಹುಲ್​ ಗಾಂಧಿ..!

0
384

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉಗ್ರನಿಗೆ ರಾಜಮರ್ಯಾದೆ ಕೊಡುವ ಮೂಲಕ ಹುತಾತ್ಮ ಯೋಧರಿಗೆ ಅವಮಾನ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಭಾಷಣ ಮಾಡುವಾಗ ಉಗ್ರನಿಗೆ ರಾಜಗೌರವ ಕೊಟ್ಟು ಮಾತನಾಡಿದ್ದಾರೆ. ಪುಲ್ವಾಮಾ ದಾಳಿಗೆ ಪಾಕ್​​ನಿಂದ ಸ್ಕೆಚ್​ ಹಾಕಿದ್ದ ಉಗ್ರ ಮಸೂದ್​ ಅಜರ್​ಗೆ ಗೌರವ ನೀಡಿ ಮಾತನಾಡಿದ್ದಾರೆ ರಾಹುಲ್ ಗಾಂಧಿ. ರಣಹೇಡಿ ಉಗ್ರ ಮಸೂದ್​ ಅಜರ್​ಗೆ ‘ಮಸೂದ್​ಜೀ’ ಅಂತ ರಾಜ ಮರ್ಯಾದೆ ಕೊಟ್ಟಿದ್ದಾರೆ ರಾಹುಲ್ ಗಾಂಧಿ. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಮತದಾರರ ಓಲೈಕೆಗಾಗಿ ರಾಹುಲ್ ಗಾಂಧಿ ಉಗ್ರನ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ ಎಂದು ಬಿಜೆಪಿ ಟೀಕಿಸುತ್ತಿದೆ.

ಉಗ್ರನಿಗೆ 'ಮಸೂದ್​ಜೀ' ಎಂದು ರಾಜಮರ್ಯಾದೆ ನೀಡಿದ ರಾಹುಲ್​ ಗಾಂಧಿ..!

Posted by Powertvnews on Monday, March 11, 2019

LEAVE A REPLY

Please enter your comment!
Please enter your name here