Home ಕ್ರೀಡೆ P.Cricket ಕೆ.ಎಲ್​ ರಾಹುಲ್​ ಕಮ್​ಬ್ಯಾಕ್​ ಆಗಲು ಕಾರಣ ದ್ರಾವಿಡ್​..!

ಕೆ.ಎಲ್​ ರಾಹುಲ್​ ಕಮ್​ಬ್ಯಾಕ್​ ಆಗಲು ಕಾರಣ ದ್ರಾವಿಡ್​..!

ಬಹಶಃ ಕಾಫಿ ಅಷ್ಟೊಂದು ಕಹಿ ಆಗುತ್ತೆ.. ಟೀಮ್​ನಿಂದಲೇ ಹೊರಗುಳಿಯುವಂತೆ ಮಾಡುತ್ತೆ ಅಂತ ಕೆ.ಎಲ್​ ರಾಹುಲ್  ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅವತ್ತು ಟೀಮ್​ ಮೇಟ್, ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಕುಡಿದಿದ್ದ ಕಾಫಿ ರಾಹುಲ್​ ಕರಿಯರ್​ ಪಾಲಿಗೆ ವಿಷವಾಗಿಬಿಟ್ಟಿತ್ತು.

ಯಸ್, ಕರುಣ್​ ಜೋಹರ್ ನಡೆಸಿ ಕೊಡೋ ‘ಕಾಫಿ ವಿತ್​ ಕರಣ್’ ಅನ್ನೋ ಟಾಕ್​ಶೋ ನಲ್ಲಿ ಮಹಿಳೆಯರು ಮತ್ತು ಸೆಕ್ಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಬಿಸಿಸಿಐ 2 ಪಂದ್ಯಗಳಿಂದ ಹೊರಗಿಟ್ಟಿತ್ತು.

ಕಾಫಿ ವಿತ್ ಕರಣ್ ಟಾಕ್​ ಶೋ ಪ್ರಸಾರವಾಗುವಾಗ ರಾಹುಲ್ ಮತ್ತು ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ವಿವಾದ ಭುಗಿಲೇಳುತ್ತಿದ್ದಂತೆ 2 ಪಂದ್ಯಗಳಿಂದ ನಿಷೇಧ ಹೇರಿದ ಬಿಸಿಸಿಐ ಭಾರತಕ್ಕೆ ವಾಪಸ್ಸು ಕರೆಸಿಕೊಂಡಿತ್ತು. ಅದಾದ ಬಳಿಕ ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ಇಬ್ಬರನ್ನೂ ಕಡೆಗಾಣಿಸಲಾಗಿತ್ತು.

ಆಸೀಸ್​ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ದೇಶಕ್ಕೆ ಮರಳಿದ್ದ ರಾಹುಲ್​ಗೆ ಅದೇ ಆಸೀಸ್​ ವಿರುದ್ಧದ ಪಂದ್ಯಗಳಿಗಾಗಿ ಟೀಮ್​ಗೆ ಮರಳಿ ಸೇರಿಸಿಕೊಂಡಿತು ಬಿಸಿಸಿಐ. ತವರಿನಲ್ಲಿ  ನಡೆಯುವ ಸರಣಿಗಾಗಿ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡ ಬಿಸಿಸಿಐ ಕಣ್ಣೆದುರಿದ್ದುದು ಮುಂದಿನ ವಿಶ್ವಕಪ್. ಆಸೀಸ್​ ಟೂರ್, ನ್ಯೂಜಿಲೆಂಡ್​ ಟೂರ್​ನಿಂದ ಹೊರಗುಳಿದಿದ್ದ ರಾಹುಲ್​ ಅವರು ಸಿಕ್ಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲೇ ಬೇಕಿತ್ತು.  ಪವರ್ ತೋರಿಸಲೇ ಬೇಕಿದ್ದ ರಾಹುಲ್ ಸೋಲಿನ ನಡುವೆಯೂ ಖದರ್ ತೋರಿಸಿ ತನ್ನ ಅವಶ್ಯಕತೆಯನ್ನು ತಿಳಿಸಿಕೊಟ್ಟಿದ್ದಾರೆ.

ಕೆ.ಎಲ್ ರಾಹುಲ್ ಅವರು ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಆಗಲು ಕಾರಣ ಮತ್ತೊಬ್ಬ ಹೆಮ್ಮೆಯ ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಕಿರಿಯರ ತಂಡದ ಗುರು ರಾಹುಲ್ ದ್ರಾವಿಡ್​.

ಆಸೀಸ್​ ಪ್ರವಾಸದಿಂದ ವಾಪಸ್ಸು ಬಂದು, ನ್ಯೂಜಿಲೆಂಡ್​ ಟೂರ್​ನಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್,  ಭಾರತ ಎ ತಂಡದ ಪರ ಆಡಿದ್ರು. ಈ ವೇಳೆ ಅವರಿಗೆ ದ್ರಾವಿಡ್​ ಅವರ ಮಾರ್ಗದರ್ಶನ ಸಿಕ್ತು.  ಇದರಿಂದ ರಾಹುಲ್ ಒಳ್ಳೆಯ ಫಾರ್ಮ್​ಗೂ ಮರಳಿದ್ರು. 89 ಮತ್ತು 81ರನ್​ಗಳನ್ನು ಗಳಿಸೋ ಮೂಲಕ ಟೀಮ್ ಇಂಡಿಯಾದ ಕದ ತಟ್ಟಿದ್ರು.

ಕೆ.ಎಲ್ ರಾಹುಲ್ ಅವರೇ ತನ್ನ ಹಿಂದಿನ ಶಕ್ತಿ ದ್ರಾವಿಡ್ ಅನ್ನೋದನ್ನು ಹೇಳಿಕೊಂಡಿದ್ದಾರೆ. ಭಾರತ ಎ ತಂಡದಲ್ಲಿ ಆಡಿದ್ದರಿಂದ ದ್ರಾವಿಡ್​ ಅವರಿಂದ ಸಾಕಷ್ಟು ಕಲಿತೆ, ಉತ್ತಮ ಪ್ರದರ್ಶನ ನೀಡಿ ಟೀಮ್​ಗೆ ಮರಳಲು ಸಾಧ್ಯವಾಯ್ತು ಅಂದಿದ್ದಾರೆ.

ವಿಶ್ವಕಪ್ ದೃಷ್ಟಿಯಿಂದ ರಾಹುಲ್ ಅವರಿಗೆ ಇನ್ನೊಂದು ಅವಕಾಶ ಕೊಟ್ಟು ನೋಡೋಣ. ಅವರು ಫಾರ್ಮ್​ಗೆ ಮರಳಿದ್ರೆ, ವರ್ಲ್ಡ್​ಕಪ್​ಗೊಬ್ಬ ನಂಬಿಕಸ್ತ ಬ್ಯಾಟ್ಸ್​ಮನ್ ಸಿಕ್ಕಂತಾಗುತ್ತೆ ಅಂತ  ಬಿಸಿಸಿಐ ಕೊಟ್ಟ ಚಾನ್ಸ್ ಅನ್ನು ರಾಹುಲ್ ಸಮರ್ಪಕವಾಗಿ ಬಳಸಿಕೊಂಡ್ರು.

2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳಲ್ಲೂ ಸೋಲುಕಂಡಿತು. ಆದರೆ, ರಾಹುಲ್ ಬ್ಯಾಟ್​ ಮಾತ್ರ ಸದ್ದು ಮಾಡಿತು. ವಿಶಾಖಪಟ್ಟಣದಲ್ಲಿ ನಡೆದ ಮೊದಲ ಮ್ಯಾಚ್​ನಲ್ಲಿ ರಾಹುಲ್ 50 ರನ್ ಗಳಿಸಿದ್ರು, ತವರಿನಂಗಳ ಚಿನ್ನಸ್ವಾಮಿಯಲ್ಲಿ ನಡೆದ 2ನೇ ಮ್ಯಾಚ್​ನಲ್ಲಿ 47 ರನ್ ಬಾರಿಸಿದ್ರು. ಇದರೊಂದಿಗೆ ತಾನು ಖಂಡಿತಾ ಟೀಮ್​ಗೆ ಆಧಾರವಾಗಿ ನಿಲ್ಲಬಲ್ಲೆ ಅನ್ನೋದನ್ನು ಪ್ರೂವ್ ಮಾಡಿದ್ರು.

ಇನ್ನು ಆಸೀಸ್​ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಒಳ್ಳೆಯ ಆಟ ಪ್ರದರ್ಶಿಸಿದ್ರೆ ರಾಹುಲ್ ವರ್ಲ್ಡ್​ಕಪ್ ನಲ್ಲಿ ಆಡೋದು ಪಕ್ಕಾ. ಎನಿವೇ.. ಕನ್ನಡಿಗ ರಾಹುಲ್ ಆಟದಲ್ಲಾಗಬಹುದು ಅಥವಾ ವೈಯಕ್ತಿಕ, ಸಾರ್ವಜನಿಕ ಜೀವನದಲ್ಲಾಗಿರಬಹುದು, ಹಿಂದೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲಿ… ದೊಡ್ಡಮಟ್ಟಿನ ಯಶಸ್ಸು ಅವರದ್ದಾಗಲಿ ಅಂತ ಹಾರೈಸೋಣ… ರಾಹುಲ್ ಇನ್ನೂ ಚೆನ್ನಾಗಿ ಆಡಿ.. ಆಲ್ ದಿ ಬೆಸ್ಟ್

 

 

 

 

 

 

 

 

 

 

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments