ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ.
ನಟಿ ರಾಗಿಣಿ ಬಿಡುಗಡೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಟಿ ರಾಗಿಣಿಗೆ ಕುಟುಂಬಸ್ಥರು ಹಾಗೂ ವಕೀಲರು ಧೈರ್ಯ ತುಂಬಿದ್ದಾರೆ. ಇಂದು ಸಂಜೆ ಬಿಡುಗಡೆಯಾಗುವ ಬಗ್ಗೆ ರಾಗಿಣಿ ಸಂತಸ ಹಂಚಿಕೊಂಡಿದ್ದಾರೆ.
ಇನ್ನೂ ಕೆಲವೇ ಹೊತ್ತಿನಲ್ಲಿ ರಾಗಿಣಿ ಬಿಡುಗಡೆ ಆದೇಶ ಪ್ರತಿ ಜೈಲಾಧಿಕಾರಿಗಳ ಕೈಯಲ್ಲಿ ಸೇರಲಿದೆ. ಬೆಲ್ ಸಿಕ್ಕೂ ನಾಲ್ಕು ದಿನ ತಡವಾಗಿ ಐದನೇ ದಿನ ಪರಪ್ಪನ ಅಗ್ರಹಾರದಿಂದ ಪಂಜರದ ಗಿಣಿ ನಟಿ ರಾಗಿಣಿ ಬಿಗಡೆಯಾಗಲಿದ್ದಾರೆ.