ರಾಜಕೀಯಕ್ಕೂ ಎಂಟ್ರಿ ಕೊಟ್ರು ನಮ್ ರಾಘಣ್ಣ..!

0
1836

ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ..! ಇತ್ತೀಚೆಗಷ್ಟೇ ಸಿನಿರಂಗದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದ ನಮ್ ರಾಘಣ್ಣ ಈಗ ರಾಜಕೀಯಕ್ಕೆ ಬರ್ತಿದ್ದಾರಾ ಅನ್ನೋ ಕುತೂಹಲವೇ..? ಹೌದು, ರಾಘಣ್ಣ ರಾಜಕೀಯಕ್ಕೆ ಬರ್ತಿದ್ದಾರೆ! ಆದ್ರೆ, ರಿಯಲ್​ ಲೈಫ್​ನಲ್ಲಿ ಅಲ್ಲ..ರೀಲ್​ನಲ್ಲಿ.
ಡೈರೆಕ್ಟರ್ ಶ್ರೀಕಾಂತ್ ‘ವಾರ್ಡ್​ ನಂಬರ್ 11’ ಅನ್ನೋ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೊಂದು ಪೊಲಿಟಿಕಲ್, ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ರಾಘಣ್ಣ ರಾಜಕಾರಣಿಯಾಗಿ ನಟಿಸ್ತಿದ್ದಾರೆ. ಶ್ರೀಕಾಂತ್ ಅವರು ಹೀಗೊಂದು ಸಿನಿಮಾ ಮಾಡ್ತಿದ್ದೀನಿ. ನೀವು ಈ ಪ್ರಮುಖ ಪಾತ್ರದಲ್ಲಿ ನಟಿಸ್ಬೇಕು ಅಂತ ಕೇಳಿದಾಗ ರಾಘಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಮೇಘಶ್ರೀ, ರಕ್ಷಿತ್, ಸುಮನ್ ಅಗರ್​​ಕರ್ ಮತ್ತಿತರರು ಅಭಿನಯಿಸ್ತಿದ್ದಾರೆ.

LEAVE A REPLY

Please enter your comment!
Please enter your name here