ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯಲ್ಲಿ ಆರ್.ಎ.ಎಫ್. ಘಟಕ ಶಂಕುಸ್ಥಾಪನೆ ವಿಚಾರಕ್ಕೆ ಹೆಚ್.ಡಿ.ಕೆ. ಆಕ್ರೋಶ ವ್ಯಕಪಡಿಸಿದ್ದಾರೆ. ಶಂಕುಸ್ಥಾಪನೆ ವೇಳೆ ಫಲಕಗಳನ್ನು ಕನ್ನಡದಲ್ಲಿ ಹಾಕಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ.ಕೆ., ಕನ್ನಡವನ್ನು, ಕನ್ನಡಿಗರನ್ನು ಅವಮಾನ ಮಾಡಲಾಗಿದೆ ಎಂದು ತಮ್ಮ ಭಾವನೆ ಹೊರ ಹಾಕಿದ್ದಾರೆ. ಸ್ಥಳೀಯ ಆಡಳಿತಾತ್ಮಕ ಭಾಷೆಗೆ ಒತ್ತು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಅಮಿತ್ ಶಾ ತ್ರಿಭಾಷಾ ಸೂತ್ರಕ್ಕೆ ಒತ್ತು ನೀಡಿಲ್ಲ ಎಂದು ಆಪಾದಿಸಿದ್ದಾರೆ. ಇದಕ್ಕೆ ರಾಜ್ಯದ ಜನರಿಗೆ ಅವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಕ್ಕೆ ಮನ್ನಣೆ ನೀಡದೇ ಇರುವುದು ಅಕ್ಷಮ್ಯವಾಗಿದ್ದು, ಕನ್ನಡದ ಅವಗಣನೆ ನಿಚ್ಚಳವಾಗಿದೆ ಎಂದು ದೂರಿದ್ದಾರೆ.
ಇನ್ನೂ ಈ ಟ್ವೀಟ್ ಗೆ ರಿಯಾಕ್ಟ್ ಮಾಡಿರುವ ನೆಟ್ಟಿಗರು, ಕಾರ್ಯಕ್ರಮದ ನಿರೂಪಣೆ ಮಾಡುವವರು ಕೂಡ ಕನ್ನಡದಲ್ಲಿ ಮಾಡಿದ್ದರೆ, ಹೊರಗಿನಿಂದ ಬಂದವರಿಗೆ ಕನ್ನಡದ ಪರಿಚಯವಾಗುತ್ತಿತ್ತು. ಅಲ್ಲದೇ, ಅಮಿತ್ ಶಾ ಭಾಷಣ ಕೂಡ ಕನ್ನಡದಲ್ಲಿ ಅನುವಾದ ಮಾಡಬೇಕಿತ್ತು ಎಂದು ಟ್ವೀಟಿಸಿದ್ದಾರೆ.