‘ ಈ ಸಲ ರಾಧಿಕಾ ಬರ್ತ್​​ಡೇ ಆಚರಿಸಲ್ಲ’ ಅಂದ್ರು ಯಶ್..!

0
396

ಸ್ಯಾಂಡಲ್​​ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ನಾಳೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಅವರ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲ್ಲ ಅಂತ ಅವರ ಪತಿ, ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ರಾಧಿಕಾ ಬರ್ತ್​ಡೇ ಆಚರಣೆ ಮಾಡದಿರಲು ಕಾರಣ ಡೆಡ್ಲಿ ಕೊರೋನಾ! ನಗರದಲ್ಲಿ ಮಾತನಾಡಿದ ಯಶ್, ಕೊರೋನಾ ಭೀತಿಯಿಂದ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸೋದು ಬೇಡ ಅಂತ ತೀರ್ಮಾನಿಸಿದ್ದೇವೆ. ಮಕ್ಕಳು ಬೇರೆ ಇರೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಭೀರುತ್ತೆ ಅಂದಿದ್ದಾರೆ.
ಅಲ್ಲದೆ ಕೊರೋನಾ ಭೀತಿಯಿಂದ ಜನರೆಲ್ಲಾ ಗುಂಪು ಗುಂಪಾಗಿ ಸೇರೋಕೆ ಆಗಲ್ಲ. ಆದ್ರಿಂದ ರಾಜ್ಯದ ಜನ ಹುಷಾರಾಗಿರ್ಬೇಕು. ಸ್ವಲ್ಪ ಆರೋಗ್ಯ ಕೆಟ್ರೂ ಚಿಕಿತ್ಸೆ ಪಡೆದುಕೊಳ್ಳಿ ಅಂತ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here