Home P.Special ವಿಜ್ಞಾನ-ತಂತ್ರಜ್ಞಾನ ರೈಲ್ವೆ ಅಪಘಾತ ತಡೆಯಲು ಬರುತ್ತಿದೆ ರಾಡರ್​..!

ರೈಲ್ವೆ ಅಪಘಾತ ತಡೆಯಲು ಬರುತ್ತಿದೆ ರಾಡರ್​..!

ರೈಲ್ವೆ ದುರಂತ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಇತ್ತೀಚೆಗೆ ಕಾನ್ಪರದಲ್ಲಿ ನಡೆದ ರೈಲು ಅಪಘಾತದಿಂದ 146 ಜನ ತಮ್ಮ ಪ್ರಾಣಕಳೆದುಕೊಂಡು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇಂಡಿಯಾದಲ್ಲಿ ಪ್ರತೀ ವರ್ಷ ನೂರಾರು ಜನರು ತಮ್ಮದಲ್ಲದ ತಪ್ಪಿಗೆ ರೈಲ್ವೆ ದುರಂತದಲ್ಲಿ ಪ್ರಾಣಕಳೆದು ಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ನೀಡಲು ಕೆಂದ್ರ ಸರ್ಕಾರ ‘’ರಾಡರ್’’​ ಎಂಬ  ತಂತ್ರಜ್ಞಾನವನ್ನು ಶೀಘ್ರದಲ್ಲೇ ಎಲ್ಲಾ ಟ್ರೈನ್​ಗಳಿಗೂ ಅಳವಡಿಸಲಿದೆ.

ಏನಿದು ರಾಡರ್ ಹೇಗೆ ಕೆಲಸ ನಿರ್ವಹಿಸುತ್ತದೆ​ ?  

ರಾಡರ್​ ಎಂಬುದು ಚಲಿಸುವ ತರಂಗಗಳನ್ನು ಸೂಚಿಸುವ ತಂತ್ರಜ್ನಾನವಾಗಿದೆ. ಇದನ್ನು ಟ್ರೈನ್ನ ಮುಂಭಾಗದಲ್ಲಿ ಅಳವಡಿಸಿಲಾಗುತ್ತದೆ. ಚಲಿಸುವ ವೇಳೆ  ​ ಟ್ರ್ಯಾಕ್​  ಮೇಲೆ  ಯಾವುದಾದರು  ಅಡಚಣೆ ಇರುವುದು ಕಂಡುಬಂದಲ್ಲಿ   ರಾಡರ್​ ಟೆಕ್ನಾಲಜಿ ಅದನ್ನು 2-3 ಕಿ.ಮೀ ದೂರದಿಂದಲೇ ಮುನ್ಸೂಚನೆ ನೀಡುತ್ತದೆ. ಇದರಿಂದ ಟ್ರೈನ್​​ನನ್ನು ನಿಲ್ಲಿಸಿ ಅಪಘಾತವನ್ನು ತಡೆಯಬಹುದು.

ಇನ್ನೂ ಪ್ರತಿ ವರ್ಷ ಚಳಿಗಾಲದಲ್ಲಿ ಅತೀ ಹೆಚ್ಚು ಮಂಜು ಇರುವುದರಿಂದ ಅದೆಷ್ಟೋ ಟ್ರೈನ್​ಗಳನ್ನು ನಿಲ್ಲಿಸಲಾಗುತ್ತದೆ.  ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣವೂ ಸಹ ಲಾಸ್​ ಆಗುತ್ತಿದೆ. ಹಾಗೂ ಮಂಜು ಸರಿದಿರುವುದರಿಂದ ಟ್ರೈನ್​ ಚಲಾವಣೆಯೂ ಕಷ್ಟ, ಈ ರಾಡರ್​ ಅಳವಡಿಕೆಯಿಂದ ಕಡಿಮೆ ಬೆಳಕಿನ ಗೋಚರತೆ ಇದ್ದರೂ ಕೂಡ ವೇಗವಾಗಿ ಟ್ರೈನ್​ ಚಲಾವಣೆ ಮಾಡಬಹುದು. 2002-03 ರಲ್ಲಿಯೇ ಈ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಆಗ ಅಡ್ವಾನ್ಸ್​ ಟೆಕ್ನಾಲಜಿ ಇಲ್ಲದ ಕಾರಣ ಅದನ್ನು ಉಪಯೋಗಿಸುವಲ್ಲಿ ಭಾರತ ವಿಫಲವಾಗಿತ್ತು.  ಇದೀಗ ಮತ್ತೆ ಅಡ್ವಾನ್ಸ್​ ಟೆಕ್ನಾಲಜಿಯನ್ನು ಡೆವೆಲಪ್​ ಮಾಡಿದ್ದು, ಟ್ರೈನ್​ಗಳಲ್ಲಿ ಅಳವಡಿಸಲು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.   

ಇತ್ತೀಚೆಗೆ ಸದನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಪೀಯೂಶ್ ಗೋಯಲ್​ರವರು ಸಹ ಶೂನ್ಯ ವೇಳೆಯಲ್ಲಿ​ ಈ ವಿಷಯ ಪ್ರಸ್ತಾಪಿಸಿ  ಆದಷ್ಟು ಬೇಗ ರಾಡರ್​ ಅಡವಳಿಕೆ ಮಾಡಲು ಮನವಿ ಮಾಡಿದ್ದರು. ಈ ತಂತ್ರಜ್ಞಾನದ ಬಳಕೆಯಿಂದಾದರು  ಭಾರತದಲ್ಲಿ ರೈಲು ಅಪಘಾತಗಳು ಕಡಿಮೆಯಾಗುತ್ತದೆಯ ಎಂದು ಕಾದು ನೋಡಬೇಕಾಗಿದೆ.  

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments