Saturday, May 21, 2022
Powertv Logo
Homeರಾಜ್ಯಮುಸ್ಲಿಮರು ಕೆಟ್ಟವರಲ್ಲ :ಆರ್​​. ಅಶೋಕ್​​

ಮುಸ್ಲಿಮರು ಕೆಟ್ಟವರಲ್ಲ :ಆರ್​​. ಅಶೋಕ್​​

ಬೆಂಗಳೂರು : ಎಲ್ಲಾ ಮುಸ್ಲಿಮರೂ ಕೆಟ್ಟವರಲ್ಲ. ಪಾಕಿಸ್ತಾನಕ್ಕೆ‌ ಜೈ ಅನ್ನುವವರೂ ಇಲ್ಲಿ ಇದ್ದಾರೆ ಎಂದು ಸಚಿವ ಆರ್​​. ಅಶೋಕ್​​ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲ ಆದಾಗ ರಾಮನಗರ, ಚನ್ನಪಟ್ಟಣದಲ್ಲಿ ಕೋಮು ಗಲಭೆ ಹಬ್ಬಿಸಿದ್ದರು. ಇದು ಕಾಂಗ್ರೆಸ್ ಪರಿಪಾಟ. ಪಾರ್ಟಿ ಉದ್ಧಾರಕ್ಕಾಗಿ ಗಲಭೆ ಸೃಷ್ಟಿ ಮಾಡುತ್ತಾರೆ. ಕೆ.ಜಿ ಹಳ್ಳಿ,‌ ಡಿ.ಜೆ ಹಳ್ಳಿ ಗಲಭೆ ನಡೆಸಿದ್ದು ಅವರೇ, ಹುಬ್ಬಳ್ಳಿ ಗಲಭೆ ನಡೆದಾಗ, ಅಮಾಯಕರನ್ನ ಬಂಧಿಸಿದ್ದಾರೆ ಅಂತ ಹೇಳಿದರು. ಈಗ ಮೌನವಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ, ಮೌಲ್ವಿ ಬಂಧನ ಆಗಿದೆ. ಎಲ್ಲಾ ಘಟನೆ ಹಿಂದೆ ಕಾಂಗ್ರೆಸ್ ಭಾಗಿಯಾಗಿರೋದು ಕಂಡು ಬರ್ತಿದೆ ಎಂದು ಕಿಡಿಕಾರಿದರು.

ಅದುವಲ್ಲದೇ ಕೃತ್ಯ ಮಾಡ್ತಿರೋದನ್ನ ಯಾರು ಮಾಡಿಸ್ತಿದ್ದಾರೆ ಎಂಬುದು ಸರ್ಕಾರ ತನಿಖೆ ಮಾಡಬೇಕು. ಹಿಜಾಬ್ ವಿಚಾರದಲ್ಲೂ ಕೂಡ ಹೀಗೆ ಆಗಿದೆ. ಕನ್ನಡ ಚಾನಲ್​​ನಲ್ಲಿ ವರದಿ ಬರದೆ, ವಿದೇಶಿ ಚಾನಲ್‌ನಲ್ಲಿ ಮೊದಲು ಪ್ರಸಾರ ಆಯ್ತು. ಕಾಂಗ್ರೆಸ್ ಎಂಎಲ್‌ಎ ಬಹುಮಾನ ಕೊಡ್ತಾರೆ. ಇದೆಲ್ಲದರ ಹಿಂದೆ ಅವರ ಕೈವಾಡ ಇದೆ.ಇದೆಲ್ಲದಕ್ಕೂ ಅವರೇ ಉತ್ತರ ಕೊಡಬೇಕು ಎಂದರು.

ಇನ್ನು ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಬರಬೇಕು ಅಂತ ಹೇಳಿದ್ದೇವೆ. ಎಲ್ಲಾ ಮುಸ್ಲಿಮರೂ ಕೆಟ್ಟವರಲ್ಲ. ಇಲ್ಲೇ ಇದ್ದು ಪಾಕಿಸ್ತಾನಕ್ಕೆ‌ ಜೈ ಅನ್ನುವವರೂ ಸಹ ಇಲ್ಲಿ ಇದ್ದಾರೆ. ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದವರಿಗೆ ಶಿಕ್ಷೆ ಆಗಬೇಕು. ಅಕ್ರಮವಾಗಿ ಮನೆ ಕಟ್ಟಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವರ ಫೋಟೋಗಳನ್ನ ಒಳ ಉಡುಪುಗಳ ಮೇಲೆ ಹಾಕಿದ್ದಾರೆ. ನಾವು ಅದನ್ನ ಕೋರ್ಟ್ ಮೂಲಕ ಬಗೆಹರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಆದರೆ, ಯಾವುದೋ ಸ್ಟೇಟಸ್‌ಗೆ ಬೆಂಕಿ ಹಚ್ಚೋ ಕೆಲಸ ನಡೆದಿದೆ. ಹುಬ್ಬಳ್ಳಿ ಗಲಭೆ ಹಿಂದೆ ಪಿತೂರಿ ನಡೆದಿದೆ. ಮತ್ತು ಇಲ್ಲಿನ ವ್ಯಾಪಾರ, ವಹಿವಾಟುಗಳ ಹಿಂದೆ ದಂಗೆ ಕೋರರು ಯಾರೇ ಇರಬಹುದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದು ಹೇಲಿದರು.

- Advertisment -

Most Popular

Recent Comments