ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಉತ್ತರ ಪ್ರದೇಶದಿಂದ ಉಡುಪಿಗೆ ಬಂದಿದ್ದು, ಜುಲೈ ೧ ರಿಂದ ೧೪ ರವರೆಗೆ ಸುಮಾರು ೧೪ ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಅಲ್ಲಿ ಇರಬೇಕಾಗಿತ್ತು. ಆದರೆ ವಿನಯ್ ಕುಮಾರ್ ಕಾರ್ಕಳ ತೆರಳಿದ್ದರು, ಈ ವೇಳೆ ನಗರಸಭೆಯ ನೌಕರ ಸುದೀಪ್ ಶೆಟ್ಟಿ ಕ್ವಾರಂಟೈನ್ ವಿಚಾರವಾಗಿ ಕರೆ ಮಾಡಿದಾಗ ನಿಯಮ ಉಲ್ಲಂಘನೆ ಸಾಬೀತಾಗಿದೆ. ಈ ಕುರಿತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಉಡುಪಿ ನಗರಸಭಾ ಕೋವಿಡ್ ಫ್ಲೈಯಿಂಗ್ ಸ್ಕ್ವ್ಯಾಡ್ ಅಧಿಕಾರಿ ಮೋಹನ್ ರಾಜು ಕೆ ಎಮ್ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಾಗಿದೆ.