Monday, May 23, 2022
Powertv Logo
Homeಸಿನಿಮಾಪುಷ್ಪ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ ಕನ್ನಡಾಭಿಮಾನ

ಪುಷ್ಪ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ ಕನ್ನಡಾಭಿಮಾನ

ಈ ವಾರದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ರಿಲೀಸ್ ಅಂದ್ರೆ ಅದು ಪುಷ್ಪ. ಸುಕುಮಾರ್ ಹೊಸ ಪ್ರಯೋಗದಲ್ಲಿ ಐಕಾನ್ ಸ್ಟಾರ್ ಜೊತೆ ನಮ್ಮ ರಶ್ಮಿಕಾ, ಡಾಲಿ ಧನಂಜಯ ಕೂಡ ಖದರ್ ತೋರಿದ್ದಾರೆ.

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪರಾಜ್ ಆಗಿ ಎಂಟ್ರಿ ಕೊಡ್ತಿರೋ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಇತ್ತ ಅಲ್ಲು ಅರ್ಜುನ್ ಅಭಿಮಾನಿಗಳಂತೂ ಹಗಲಿರುಳು ಪುಷ್ಪ ಮಂತ್ರವನ್ನೇ ಜಪಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ಸ್ಯಾಂಪಲ್ಸ್ ಮೂಲಕವೇ ಜಬರ್ದಸ್ತ್ ಆಗಿ ಸದ್ದು ಮಾಡ್ತಿದ್ದು, ಇದೇ ವಾರ ಸಿನಿಮಾ ತೆರೆಗಪ್ಪಳಿಸೋಕೆ ಸಜ್ಜಾಗಿದೆ.

ಸಿನಿಮಾ ರಿಲೀಸ್​ಗಾಗಿ ಸಿದ್ಧತೆಗಳನ್ನು ಮಾಡಿಕೊಳ್ತಿರೋ ಸುಕುಮಾರ್ ಅಂಡ್ ಟೀಮ್, ಚಿತ್ರ ಬಿಡುಗಡೆಗೂ ಮುನ್ನ ಹೈದರಾಬಾದ್​ನಲ್ಲಿ ಗ್ರ್ಯಾಂಡ್ ಪ್ರೀರಿಲೀಸ್ ಇವೆಂಟ್​ನ ಹಮ್ಮಿಕೊಂಡಿತ್ತು. ಚಿತ್ರದ ನಾಯಕ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ವಿಶೇಷ ಅಂದ್ರೆ ಖ್ಯಾತ ನಿರ್ದೇಶಕ ರಾಜಮೌಳಿ ಈ ಸಮಾರಂಭಕ್ಕೆ ಅತಿಥಿಯಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪುಷ್ಪ ಚಿತ್ರದ ಪ್ರತಿಯೊಬ್ಬ ಕಲಾವಿದರೂ ಸಹ ಸಿನಿಮಾ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ಜಾಲಿರೆಡ್ಡಿ ಅನ್ನೋ ನೆಗೆಟೀವ್ ರೋಲ್​ನಲ್ಲಿ ಮಿಂಚಿರೋ ನಮ್ಮ ಡಾಲಿ ಧನಂಜಯ, ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಾಭಿಮಾನ ತೋರಿದ್ದು ವಿಶೇಷ.

ಕಾರ್ಯಕ್ರಮದಲ್ಲಿ ಧನಂಜಯ ಮಾತನಾಡುತ್ತಾ, ನಾಯಕ ಅಲ್ಲು ಅರ್ಜುನ್ ನಟನೆ ಹಾಗೂ ನಿರ್ದೇಶಕ ಸುಕುಮಾರ್ ಪರಿಶ್ರಮವನ್ನು ಹಾಡಿ ಹೊಗಳಿದರು. ಜೊತೆಗೆ ಈ ಸಿನಿಮಾದಲ್ಲಿ ತಮಗೆ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೈತ್ರಿ ಮೂವೀಸ್​ ಬ್ಯಾನರ್​ಗೂ ಧನ್ಯವಾದವನ್ನು ಹೇಳಿದರು.

ಪುಷ್ಪ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಇದೇ ವಾರ ಸಿನಿಮಾ ರಿಲೀಸ್ ಆಗ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ಪುಷ್ಪ ಸಿನಿಮಾ ಅಬ್ಬರಿಸಲಿದೆ. ಇನ್ನೂ ಈ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ ಬೆಡಗು ಬಿನ್ನಾಣ ತೋರಲಿದ್ದಾರೆ. ಗೀತ ಗೋವಿಂದಂ ಚಿತ್ರದಿಂದಲೂ ಬನ್ನಿ ಜೊತೆ ನಟಿಸೋ ಆಸೆ ಕೊನೆಗೂ ಇಂದಿಗೆ ಈಡೇರಿದೆ ಅಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಭಿನ್ನ ಕಥೆಯ ಜೊತೆ ಅದಕ್ಕಾಗಿ ಹೊಸ ಸಾಮ್ರಾಜ್ಯವನ್ನೇ ಸೃಷ್ಟಿಸೋ ಸುಕುಮಾರ್, ಈ ಬಾರಿ ಅಭಯಾರಣ್ಯದಲ್ಲಿ ನಡೆಯೋ ರಕ್ತಚಂದನ ಮರಗಳ ಸ್ಮಗ್ಲಿಂಗ್ ಮೇಲೆ ಬೆಳಕು ಚೆಲ್ಲಿದ್ದಾರೆ. ಪುಷ್ಪರಾಜ್ ಅನ್ನೋ ಗ್ಯಾಂಗ್​ಲೀಡರ್ ಹಾಗೂ ಆತನ ಸ್ಮಗ್ಲಿಂಗ್ ಸಾಮ್ರಾಜ್ಯದ ಜೊತೆ ಅವನನ್ನ ಹಿಡಿಯಲು ಬೆನ್ನಟ್ಟೋ ಖಾಕಿ ಪಡೆ, ಮಧ್ಯೆ ಒಂದಷ್ಟು ವಿಲನ್ಸ್ ಹೀಗೆ ಟ್ರೈಲರ್​ನಿಂದ ಕ್ಯೂರಿಯಾಸಿಟಿ ಹೆಚ್ಚಿಸಿದೆ.

15 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments