Home ರಾಜ್ಯ ರಾಜ್ಯಕ್ಕೆ ನೆರೆಪರಿಹಾರ ತರಲಾಗದ ಸಂಸದರು ರಾಜಿನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಿ : ಡಾ,ಪುಷ್ಪಾ ಅಮರನಾಥ

ರಾಜ್ಯಕ್ಕೆ ನೆರೆಪರಿಹಾರ ತರಲಾಗದ ಸಂಸದರು ರಾಜಿನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಿ : ಡಾ,ಪುಷ್ಪಾ ಅಮರನಾಥ

ಕೊಪ್ಪಳ: ಜಿ.ಎಸ್.ಟಿ ತೆರಿಗೆ ಹಣ ವಿಚಾರದಲ್ಲಿ ಕೇಂದ್ರ ಸರ್ಕಾರ ‌ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ರಾಜ್ಯದ ತೆರಿಗೆ ಹಣವನ್ನು ತರುವುದಕ್ಕೆ ಆಗದ ನಮ್ಮ ರಾಜ್ಯದ 25 ಸಂಸದರು ಎಲ್ಲರೂ ರಾಜೀನಾಮೆ ನೀಡಲಿ ಎಂದು ಕೊಪ್ಪಳದಲ್ಲಿ ಕೆಪಿಸಿಸಿ ಮಹಿಳಾ ಅಧ್ಯಕ್ಷ ಡಾ.ಪುಷ್ಪಾ ಅಮರನಾಥ ರಾಜ್ಯದ ಸಂಸದರ ವಿರುದ್ಧ ಹರಿಹಾಯ್ದರು.

ಮಹಿಳಾ‌ ಕಾರ್ಯಕರ್ತರ ಸಂಘಟನೆ ಕಾರ್ಯಕ್ರಮಕ್ಕೆ ಕೊಪ್ಪಳಕ್ಕೆ ಆಗಮಿಸಿದ ಡಾ.ಪುಷ್ಪಾ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಹಿಳಾ ಕಾರ್ಯಕರ್ತರ ಸಭೆ ನೆಡಸಿದರು. ಈ ವೇಳೆ ಕಾರಟಗಿಗೆ ಆಗಮಿಸಿದ್ದ ಪುಷ್ಪಾ ಕೇಂದ್ರ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು. ಕೇಂದ್ರ ಸರ್ಕಾರವು ನಾವು ಕಟ್ಟಿದ ಜಿ ಎಸ್ ಟಿ ತೆರಿಗೆ ಹಣವನ್ನು ನಮಗೆ ಕೊಡಲು ಮೀನಮೇಷ ಎಣಸ್ತಿದೆ. ‌ಅಷ್ಟೇ ಅಲ್ಲದೆ ಕಳೆದ‌ ಬಾರಿ ಸಂಭವಿಸಿದ ನೆರೆಹಾವಳಿಯ ಪರಿಹಾರವನ್ನೆ ನಮ್ಮ ರಾಜ್ಯಕ್ಕೆ ಪೂರ್ಣವಾಗಿ ನೀಡಿಲ್ಲಾ. ಸತತ ಎರಡನೆ ಬಾರಿಯೂ ರಾಜ್ಯದಲ್ಲಿ ನೆರೆ ಹಾವಳಿ ಸಂಭವಿಸಿದೆ. ಇನ್ನೂ ಇದರ ಪರಿಹಾರ ಹಣ ಯಾವಾಗ ಕೋಡ್ತಾರೆ. ಈ ಬಗ್ಗೆ ಪ್ರಧಾನಿಯವರಿಂದ ಪರಿಹಾರ ಹಣ ತರುವಲ್ಲಿ ರಾಜ್ಯ ಸಂಸದರು ಸಂಪೂರ್ಣ ವಿಫಲವಾಗಿದ್ದರೆ. ತಮ್ಮ ಕೈಯಲ್ಲಿ ಪರಿಹಾರ ಹಣ ಕೊಡಿಸಲು ಆಗದಿದ್ದಾರೆ ಎಲ್ಲಾ 25 ಸಂಸದರು‌ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಿ ಎಂದು ರಾಜ್ಯದ ಸಂಸದರ ವಿರುದ್ಧ ಗುಡುಗಿದರು. ಇನ್ನೂ ಕಳೆದ ಒಂದು ವಾರದಿಂದ ಪೇಟ್ರೋಲ್,ಡಿಸೇಲ್, ಬೆಲೆಯಲ್ಲಿ‌ ಗಣನೀಯವಾಗಿ ಎರಿಕೆಯಾಗ್ತಿದೆ‌. ಈ ಬಗ್ಗೆ ನಾವು ಸಹ ಬೆಲೆ ಎರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆವೆ ಎಂದು ಹೇಳಿದರು.

-ಶುಕ್ರಾಜ ಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು : ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು,...

ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ವಿಜಯಪುರ : ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ....

ಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ...

‘4 ವರ್ಷ ಸರೆಮನೆ ವಾಸ ಪೂರ್ಣಗೊಳಿಸಿದ ಶಶಿಕಲಾ’

ಬೆಂಗಳೂರು: ದಿ.ಜಯಲಲಿತಾ ಆಪ್ತೆ ಶಶಿಕಲಾ 4 ವರ್ಷ ಶಿಕ್ಷೆ ಅವಧಿ ಪೂರ್ಣಗೊಳಿಸಿ ಇಂದು ಬಿಡುಗಡೆಯಾಗುತ್ತಿದ್ದಾರೆ.  ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಶಶಿಕಲಾ ಜೈಲು ಸೇರಿದ್ದರು. ಜೈಲಾಧಿಕಾರಿಗಳು ಆಸ್ಪತ್ರೆಗೆ ಬಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ, ಶಶಿಕಲಾಯಿಂದ...

Recent Comments