Saturday, October 1, 2022
Powertv Logo
Homeದೇಶಪಂಜಾಬ್ ಚುನಾವಣೆ: ಬಿಜೆಪಿಯನ್ನು ಟೀಕಿಸಿದ ಮಾಜಿ ಪ್ರಧಾನಿ ಮನಮೋಹನ್​ಸಿಂಗ್

ಪಂಜಾಬ್ ಚುನಾವಣೆ: ಬಿಜೆಪಿಯನ್ನು ಟೀಕಿಸಿದ ಮಾಜಿ ಪ್ರಧಾನಿ ಮನಮೋಹನ್​ಸಿಂಗ್

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ವಿರೋಧಿಗಳೂ ಗೌರವ ತೋರುವ ವ್ಯಕ್ತಿತ್ವ ಹೊಂದಿರುವ, ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ತತ್ವವನ್ನು ಸಾರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಿಂದ ಜನತೆಗೆ ಚುನಾವಣಾ ಸಂದೇಶವೊಂದು ಬಿಡುಗಡೆಯಾಗಿದೆ.

ಮನ​ಮೋಹನ್​ಸಿಂಗ್ ದೇಶದ ಬಗ್ಗೆ ಚಿಂತಿತರಾಗಿ ಮಾತನಾಡಿದ್ದಾರೆ. ಸದ್ಯದ ಸ್ಥಿತಿ ತುಂಬಾ ಚಿಂತಾಜನಕವಾಗಿದೆ
ಕೋವಿಡ್ ನಿಂದ ದೇಶ ತತ್ತರಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸ್ಥಿತಿಯಿಂದ ಜನ ಸಂಕಷ್ಟದಲ್ಲಿ ಇದ್ದಾರೆ. ಕಿಸಾನ್ ಅಂದೋಲನ ಮುಂದಿಟ್ಟು ಪಂಜಾಬ್ ಹೆಸರು ಕೆಡಿಸಲು ಮುಂದಾಗಿದ್ದರು. ಪ್ರಧಾನಿಗೆ ಭದ್ರತೆ ವಿಚಾರದಲ್ಲೂ ಪಂಜಾಬ್ ರಾಜ್ಯಕ್ಕೆ ಧಕ್ಕೆಯಾಗಿದೆ. ಕೇಂದ್ರ ಸರ್ಕಾರದ ನೀತಿ ಕೇವಲ ಸ್ವಾರ್ಥಕ್ಕಾಗಿ ಬಳಕೆಯಾಗ್ತಿದೆ. ಕೇಂದ್ರದ ರಾಷ್ಟ್ರವಾದದ ನೀತಿಯೂ ನಕಲಿಯಾಗಿದೆ ಎಂದರು.

ಕೇಂದ್ರ ಸರ್ಕಾರದ ಮೇಲೆ ಕಿಂಚಿತ್ತೂ ಭರವಸೆಯಿಲ್ಲ. ಸತ್ಯ ಒಂದಲ್ಲ ಒಂದು ದಿನ ಬೆಳಕಿಗೆ ಬರಲಿದೆ. ಪಂಜಾಬ್ ಜನತೆಯ ಮೇಲೆ ನನಗೆ ಸಾಕಷ್ಟು ಭರವಸೆ ಇದೆ. ನಿರುದ್ಯೋಗ, ರೈತರ ಸಮಸ್ಯೆ, ಬೆಲೆ ಏರಿಕೆ ಎಲ್ಲವೂ ಈಡೇರಿಸಬೇಕಿದೆ. ಎಲ್ಲಾ ಸಮಸ್ಯೆ ಬಗೆ ಹರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಪಂಜಾಬ್ ಜನತೆ ಕಾಂಗ್ರೆಸ್ ಗೆ ಮತ ನೀಡಬೇಕೆಂದು ಮನಮೋಹನ್​ಸಿಂಗ್ ವಿಡಿಯೋ ಸಂದೇಶದ ಮೂಲಕ ಪಂಜಾಬ್ ಜನತೆಗೆ ಮನವಿ ಮಾಡಿದರು.

- Advertisment -

Most Popular

Recent Comments