Saturday, October 1, 2022
Powertv Logo
Homeಈ ಕ್ಷಣಪಂಜಾಬ್‌ ಮುಖ್ಯಮಂತ್ರಿಗೆ ಎರಡನೇ ಮದುವೆ ಸಂಭ್ರಮ

ಪಂಜಾಬ್‌ ಮುಖ್ಯಮಂತ್ರಿಗೆ ಎರಡನೇ ಮದುವೆ ಸಂಭ್ರಮ

ಪಂಜಾಬ್​ : ಪಂಜಾಬ್‌ ಮುಖ್ಯಮಂತ್ರಿಗೆ ಎರಡನೇ ಮದುವೆ ಸಂಭ್ರಮ..ತಮಗಿಂತ 16 ವರ್ಷ ಚಿಕ್ಕವರಾಗಿರುವ ಗುರುಪ್ರೀತ್‌ ಕೌರ್‌ ಅವರ ಜೊತೆ ಹಸೆಮಣೆ ಏರಿದ್ದಾರೆ..

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.. ಅದ್ರ ಸಾರಥ್ಯ ಭಗವಂತ್‌ ಮಾನ್‌ ಹೆಗಲೇರಿದ್ದು, ಸಾಕಷ್ಟು ಚುರುಕಾಗಿ ಅಭಿವೃದ್ಧಿ ಕಾರ್ಯಗಳತ್ತ ಗಮನ ವಹಿಸಿದ್ದಾರೆ.. ಈ ಮಧ್ಯೆ, ರಾಜಕೀಯ ಜಂಜಾಟದ ನಡುವೆ ಸಿಹಿ ಸುದ್ದಿ ನೀಡಿದ್ರು.. ಹೌದು, ಅದು ಅವರ ಮದುವೆ ವಿಷ್ಯ.

ಗುರುಪ್ರೀತ್ ಕೌರ್ ಜೊತೆ ಪಂಜಾಬ್ ಸಿಎಂ ಭಗವಂತ್ ಮಾನ್ ಅದ್ದೂರಿಯಾಗಿ ನಡೀತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಂದೆ ಸ್ಥಾನದಲ್ಲಿ ನಿಂತು ವಿಧಿವಿಧಾನಗಳನ್ನು ನೆರವೇರಿಸಿದರು. ಇದರಲ್ಲಿ ಭಗವಂತ್ ಮಾನ್ ಹಳದಿ ಪೇಟ ಧರಿಸಿ ವರನಾಗಿ ಕಾಣಿಸಿಕೊಂಡಿದ್ದು, ವಧು ಗುರುಪ್ರೀತ್ ಕೌರ್ ಕೂಡ ಕೆಂಪು ಬಟ್ಟೆಯಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ರಾಜಕಾರಣದ ಜೊತೆಗೆ, ಮತ್ತೊಮ್ಮೆ ಗೃಹಸ್ತಾಶ್ರಮ ಸೇರಿದ್ದು, ಸಿಲ್ಕ್‌ ಗೋಲ್ಡನ್ ಕಲರ್‌ ಕುರ್ತಾ ಪೈಜಾಮದಲ್ಲಿ ಫುಲ್‌ ಮಿಂಚಿದ್ರು.. ಹಳದಿ ಪೇಟವನ್ನು ಮುತ್ತು ಹಾಗೂ ಹೊಳೆಯುವ ಕಲ್ಲುಗಳ ಬ್ರೂಚ್ನಿಂದ ಅಲಂಕರಿಸಲಾಗಿತ್ತು.

ವಧು ಡಾಕ್ಟರ್ ಗುರುಪ್ರೀತ್ ಕೌರ್ ಕೆಂಪು ಬಣ್ಣದ ಲೆಹೆಂಗಾ-ಚೋಲಿಯನ್ನು ಧರಿಸಿದ್ದರು. ಆಭರಣಗಳಿಂದ ಕಂಗೊಳಸುತ್ತಿದ್ದ ಕೌರ್ ಕತ್ತಿನಲ್ಲಿ ಹಾರ, ಕೈಯಲ್ಲಿ ಬಳೆಗಳು ಮತ್ತು ಮೂಗು ಬೊಟ್ಟು ಧರಿಸಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಸೇರಿ ಆಮ್‌ ಆದ್ಮಿ ಪಾರ್ಟಿಯ ಪ್ರಮುಖರು ಭಗವಂತ್ ಮಾನ್ ದಂಪತಿಗೆ ಶುಭಕೋರಿದ್ದಾರೆ.

ಭಗವಂತ್ ಮಾನ್ ಮತ್ತು ಗುರುಪ್ರೀತ್ ಕೌರ್ ಅವರ ವಿವಾಹವು ಸಿಖ್ ಸಂಪ್ರದಾಯದ ಪ್ರಕಾರ ನಡೆಯಿತು. ಮದುವೆಗೆ ಸೀಮಿತ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಸಿಎಂ ನಿವಾಸದಲ್ಲಿಯೇ ಮದುವೆ ಕಾರ್ಯಕ್ರಮ ನಡೀತು.

ಚಂಡೀಗಡದ ಮಾನ್ ನಿವಾಸದಲ್ಲಿ ನಡೆದ, ಕೆಲವೇ ಆಪ್ತರಿಗಷ್ಟೇ ಆಹ್ವಾನವಿದ್ದ ವಿವಾಹ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಎಎಪಿಯ ಕೆಲ ನಾಯಕರು ಉಪಸ್ಥಿತರಿದ್ದರು. ಮಾನ್ ಈ ಹಿಂದೆ ಇಂದರ್ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು. ಅವರಿಗೆ 2015 ರಲ್ಲಿ ವಿಚ್ಛೇದನ ನೀಡಿದ್ದಾರೆ. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

- Advertisment -

Most Popular

Recent Comments