ಯೋಧರನ್ನು ಕಳೆದುಕೊಂಡ ನಮಗೆ ಕತ್ತಲೆ ದಿನ: ಪುನೀತ್​

0
281

ಉಡುಪಿ: ವೀರ ಯೋಧರನ್ನು ಕಳೆದುಕೊಂಡಿರೋದು ನಮ್ಮ ಪಾಲಿಗೆ ಕತ್ತಲೆ ದಿನ ಅಂತ ನಟ ಪುನೀತ್​ ರಾಜ್​ಕುಮಾರ್​ ಹೇಳಿದ್ದಾರೆ. ಪುಲ್ವಾಮಾದಲ್ಲಿ ಉಗ್ರ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವ ಬಗ್ಗೆ ಉಡುಪಿಯಲ್ಲಿ ನಟ ಪುನೀತ್ ರಾಜ್​ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಯೋಧರನ್ನು ಕಳೆದುಕೊಂಡಿರುವುದು ನಮಗೆಲ್ಲರಿಗೂ ಕತ್ತಲೆಯ ದಿನ. ನಮಗೋಸ್ಕರ ಅವರು ಗಡಿಭಾಗದಲ್ಲಿ ಕಷ್ಟಪಡುತ್ತಾರೆ. ಅವರ ಬಗ್ಗೆ ನಾವೂ ಏನು ಮಾತಾಡಿದರೂ ಕಡಿಮೆಯಾಗುತ್ತದೆ. ಮಂಡ್ಯದ ಯೋಧ ಗುರು ಅವರು ಹುತಾತ್ಮರಾಗಿದ್ದು ತುಂಬಾ ದುಃಖವಾಗಿದೆ. ಇನ್ನು, ಸರ್ಕಾರ ಏನ್ಮಾಡ್ತಿದೆ ಅನ್ನೋದು ಮುಖ್ಯವಲ್ಲ, ನಾವು ಈ ದೇಶಕ್ಕೆ ಏನು ಮಾಡಿದ್ದೇವೆ ಅನ್ನೋದು ಮುಖ್ಯವಾಗುತ್ತೆ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here