ಶಿವಣ್ಣ, ಕಿಚ್ಚ, ಉಪ್ಪಿ, ದಚ್ಚು, ಮುರಳಿ ಹಾದಿಯಲ್ಲಿ ಪುನೀತ್ ಮತ್ತು ಯಶ್..!

0
404

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್​ ಸ್ಟಾರ್ ದರ್ಶನ್​, ರಿಯಲ್​ ಸ್ಟಾರ್ ಉಪೇಂದ್ರ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ನಡೆಯನ್ನು ಅನುಸರಿಸಲು ರೆಡಿಯಾಗಿದ್ದಾರೆ.

ಹೌದು ಕನ್ನಡ ಚಿತ್ರರಂಗದಲ್ಲೀಗ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿವೆ. 2007ರಲ್ಲಿ ತೆರೆಕಂಡ ‘ಅನಾಥರು’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಿಯಲ್​ ಸ್ಟಾರ್ ಉಪೇಂದ್ರ ಒಟ್ಟಿಗೇ ನಟಿಸಿದ್ರು. ಸಾಧುಕೋಕಿಲಾ ಆ್ಯಕ್ಷನ್ ಕಟ್​ ಹೇಳಿದ್ದ ಆ ಸಿನಿಮಾ ಸಕತ್ ಹಿಟ್​ ಕೂಡ ಆಗಿತ್ತು. ಈ ಹಿಂದೆಯೂ ಸಾಕಷ್ಟು ಮಲ್ಟಿಸ್ಟಾರ್ ಸಿನಿಮಾಗಳು ಬಂದಿವೆಯಾದರೂ ಪ್ರಸ್ತುತ ಸ್ಟಾರ್​ ಪಟ್ಟದಲ್ಲಿ ರಾರಾಜಿಸುತ್ತಿರೋ ನಟರ ಸಿನಿಮಾಗಳ ಪೈಕಿ ಈ ಸಿನಿಮಾವನ್ನು ಮೊದಲು ನೆನಪಿಸಿಕೊಳ್ಳಬಹುದು.

ಇದಾದ ನಂತರ 2016ರಲ್ಲಿ ಉಪೇಂದ್ರ ಮತ್ತೆ ಮತ್ತೊಬ್ಬ ಸ್ಟಾರ್ ಜೊತೆ ಕಾಣಿಸಿಕೊಂಡರು. ಅದೇ ‘ಮುಕುಂದ ಮುರಾರಿ’. ನಂದಕಿಶೋರ್ ಡೈರೆಕ್ಷನ್ ಮಾಡಿದ್ದ ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ಮಿಂಚಿದ್ದರು. ಈ ಸಿನಿಮಾ ಕೂಡ ಹಿಟ್ ಆಗಿತ್ತು.

2017ರಲ್ಲಿ ಶಿವರಾಜ್​ಕುಮಾರ್ ಮತ್ತು ಶ್ರೀಮುರಳಿ ‘ಮಫ್ತಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ರು. ಡೈರೆಕ್ಟರ್ ನರ್ತನ್ ಶಿವಣ್ಣ ಮತ್ತು ಮುರಳಿ ಅವರನ್ನು ಒಂದೇ ಸ್ಕ್ರೀನ್​ನಲ್ಲಿ ತಂದು ಯಶಸ್ವಿ ಕೂಡ ಆಗಿದ್ರು. 2018ರಲ್ಲಿ ಜೋಗಿ ಪ್ರೇಮ್ ನಿರ್ದೇಶನದ ‘ ದಿ ವಿಲನ್​’ ರಿಲೀಸ್​ ಆಯ್ತು. ಶಿವಣ್ಣ ಮತ್ತು ಸುದೀಪ್​ ಒಟ್ಟಿಗೆ ನಟಿಸಿದ್ರು.

ಹೀಗೆ ಸಾಲು ಸಾಲು ಮಲ್ಟಿಸ್ಟಾರ್ ಸಿನಿಮಾಗಳು ಬರುತ್ತಿವೆ. ಇದೀಗ ಒಂದೇ ಸಿನಿಮಾದಲ್ಲಿ ಪುನೀತ್ ಮತ್ತು ಯಶ್​ ನಟಿಸುವ ಸೂಚನೆ ನೀಡಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕರೆ ನಾವಿಬ್ಬರು ಒಟ್ಟಿಗೆ ನಟಿಸ್ತೀವಿ ಅಂತ ಪುನೀತ್ ಮತ್ತು ಯಶ್ ಹೇಳಿದ್ದಾರೆ. ಅಷ್ಟೇ ಅಲ್ದೇ ಆ ಕಾಲ ಬೇಗ ಕೂಡಿ ಬರಲಿ ಅಂತಲೂ ಪ್ರಾರ್ಥಿಸೋದಾಗಿ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here