Homeರಾಜ್ಯಇತರೆನಿರಂತರ ಮಳೆಯಲ್ಲೂ ಅಪ್ಪುಗೆ ನಮನ

ನಿರಂತರ ಮಳೆಯಲ್ಲೂ ಅಪ್ಪುಗೆ ನಮನ

ಚಾಮರಾಜನಗರ : ಕನ್ನಡದ ಹೆಸರಾಂತ ನಟ ಪುನೀತ್ ಅಗಲಿಕೆಯ ನೋವನ್ನು ಇನ್ನು ಜನರು ಮರೆಯುತ್ತಿಲ್ಲ. ದಿನ ಕಳೆದಂತೆ ಅವರ ಪುಣ್ಯ ಸ್ಮರಣೆಗಳು ಹೆಚ್ಚಾಗುತ್ತಿದ್ದು ಅದರಂತೆ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿ ಬಾಡೂಟ ವಿತರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಕಾಡಂಚಿನ ಗ್ರಾಮವಾದ ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಪುಷ್ಮಾಪುರದಲ್ಲಿ 20 ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ಸೇರಿಕೊಂಡು ನೂರಾರು ಕೆಜಿ ಕೋಳಿ ಮಾಂಸದಲ್ಲಿ 450 ಜನಕ್ಕೆ ಆಗುವಷ್ಟು ಚಿಕನ್ ಬಿರಿಯಾನಿ ತಯಾರಿಸಿ ತಿಂದಷ್ಟು ಬಾಡೂಟ, ಒಂದು ಸ್ವೀಟ್ ವಿತರಿಸಿ ಗಮನ ಸೆಳೆದಿದ್ದಾರೆ. ನಿರಂತರ ಮಳೆಯನ್ನು ಲೆಕ್ಕಿಸದ ಜನರು ಪುಣ್ಯ ಸ್ಮರಣೆ ನಡೆಸಿ ಅಪ್ಪು ಅಭಿಮಾನ ಮೆರೆದಿದ್ದಾರೆ.

ಮನೆ ಸದಸ್ಯನನ್ನು ಕಳೆದುಕೊಂಡ ಭಾವ ಇಡೀ ಕರ್ನಾಟಕದಾದ್ಯಂತ ಮನೆ ಮಾಡಿದ್ದು, ಪುನೀತ್ ನೆನಪು ಮತ್ತಷ್ಟು ಗಟ್ಟಿಯಾಗುತ್ತಿರುವುದು ನಟನ ಅಭಿಮಾನಕ್ಕೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments