Sunday, June 26, 2022
Powertv Logo
HomePower Specialಬಡತನದಲ್ಲಿ ಅರಳಿದ ಪ್ರತಿಭೆ ; ಪಿಯುಸಿಯಲ್ಲಿ ಹಾವೇರಿಗೆ ಟಾಪರ್..!

ಬಡತನದಲ್ಲಿ ಅರಳಿದ ಪ್ರತಿಭೆ ; ಪಿಯುಸಿಯಲ್ಲಿ ಹಾವೇರಿಗೆ ಟಾಪರ್..!

ಪಿಯುಸಿ ಪರೀಕ್ಷೆ ಅಂದ್ರೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯ ನಿರ್ಧಾರದ ಪರೀಕ್ಷೆ ಆಗಿರುತ್ತೆ, ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಕೊಟ್ರು, ಪರೀಕ್ಷೆಯಲ್ಲಿ ಸಾಧನೆ ಮಾಡುವುದಿಲ್ಲ, ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬಡತನದಲ್ಲಿಯೇ ಕಷ್ಟ ಪಟ್ಟು ಓದಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. 

ಈತ ಪಿಯುಸಿಯಲ್ಲಿ ಹಾವೇರಿ ಜಿಲ್ಲೆಗೆ  ಟಾಪರ್, ಇವನ ಹೆಸರು ಪುನೀತ್ ಬಸವಂತಪ್ಪ ತಿಪ್ಪಣ್ಣನವರ. ಈತನ ಬಗ್ಗೆ ತಿಳಿಯುವುದಾದರೆ ತಂದೆ ಬಸವಂತಪ್ಪ ತಲಾಟಿ ಕೈ ಕೆಳಗೆ ಕೆಲಸ ಮಾಡುತ್ತಾರೆ. ತಾಯಿ ರತ್ನಮ್ಮ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಾಳೆ. ಕೇವಲ ಒಂದು ಎಕರೆ ಜಮೀನನ್ನ ಹೊಂದಿದ್ದು, ಇವರದ್ದು ಬಡತನದ ಕುಟುಂಬ.. ಇದರಲ್ಲಿಯೇ ಕಷ್ಟ ಪಟ್ಟ ಈ ವಿದ್ಯಾರ್ಥಿ ಓದಿ, ಇಂದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇದು ಅವನು ಕಲಿತ ಸರ್ಕಾರಿ ಪದವಿ ಪೂರ್ವ ಕಾಲೇಜು ರಟ್ಟಿಹಳ್ಳಿ ಮತ್ತು ಅವನ ತಂದೆ ತಾಯಿಗೆ ಹೆಮ್ಮೆಗೆ ವಿಷಯವಾಗಿದೆ. ಇನ್ನು ಈತನ ಬಗ್ಗೆ ಅವರು ಶಿಕ್ಷಕರು ಕೂಡ ಹಮ್ಮೆ ಪಡುತ್ತಿದ್ದಾರೆ.

 ಈತನ ಓದಿನ ಬಗ್ಗೆ ತಿಳಿಯುವುದಾದರೆ, ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು 7 ಗಂಟೆಯವರೆಗೆ ಓದಿ, ನಂತರದಲ್ಲಿ ಮನೆಯ ಕೆಲಸ ಮುಗಿಸಿ, ತನ್ನ ತಾಯಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಿ, ಆನಂತರದಲ್ಲಿಯೇ ಇತ ತನ್ನ ಕಾಲೇಜಿಗೆ ಬರುತ್ತಿದ್ದ. ಈತನ ಊರು ರಟ್ಟಿಹಳ್ಳಿ ತಾಲ್ಲೂಕಿನ ಚಡಚಿ ಅಲ್ಲಿಂದ, ಹತ್ತು ಕಿಮೀ ದೂರದಲ್ಲಿರುವ ರಟ್ಟಿಹಳ್ಳಿಯ ಕಾಲೇಜಿಗೆ ಬಂದು ಓದುತ್ತಿದ್ದಾ, ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿ ಕೆವಲ ಓದಿನಲ್ಲಿ ಮಾತ್ರವಲ್ಲದೆ ಆಟದಲ್ಲೂ ಕೂಡ ಈತ ಸೈ ಎನಿಸಿಕೊಂಡಿದ್ದ. ಇವನ ಈ ಸಾಧನೆ ಬಗ್ಗೆ ಕೇಳಿದರೆ ಇದಕ್ಕೆ ನನ್ನ ತಂದೆ ತಾಯಿ ಹಾಗೂ ಗುರುಗಳ ಆಶೀರ್ವಾದ ಅಂತಾ ಹೇಳುತ್ತಾನೆ. 

ಇವನು ಪಡೆದ ಅಂಕಗಳ ಬಗ್ಗೆ ತಿಳಿಯುವುದಾದರೆ, ಇತಿಹಾಸ 100, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ 98, ಶಿಕ್ಷಣ ಶಾಸ್ತ್ರ 94, ಕನ್ನಡ 98, ಇಂಗ್ಲಿಷ್ 90 ಒಟ್ಟು 580 ಅಂಕಗಳನ್ನ ಪಡೆದು ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡಿದಿದ್ದಾನೆ, ಇನ್ನು ಮುಂದಿನ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಧಾರವಾಡದ ಕೆ.ಸಿ.ಡಿ ಕಾಲೇಜಿಗೆ ಬಿ.ಎ ಪದವಿಗೆ ಅಪ್ಲಿಕೇಶನ್ ಪಡೆದಿದ್ದಾನೆ, ಮುಂದೆ ಈತ ಐಎಎಸ್, ಐಪಿಎಸ್ ಅಂತಹ ಪ್ರಮುಖ ಪರೀಕ್ಷೆಗಳನ್ನು ಎದುರಿಸುವ ಗುರಿಯನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ ಸಾಕಷ್ಟು ಬಡತನದ ಮಧ್ಯೆಯೂ ಕಷ್ಟಪಟ್ಟು ಓದಿ ಇವತ್ತು ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ ಭವಿಷ್ಯದಲ್ಲಿ ಮುಂದೆ ದೊಡ್ಡ ಸ್ಥಾನಕ್ಕೆ ಏರಲಿ ಎಂಬುವುದೇ ನಮ್ಮ ಆಶಯ.

-ವಿನಾಯಕ ಬಡಿಗೇರ್ 

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments