ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಹುತಾತ್ಮ ಯೋಧರ ಸಂಖ್ಯೆ 20ಕ್ಕೆ ಏರಿಕೆ

0
288

ಶ್ರೀನಗರ : ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಉಗ್ರರು ರಾಕ್ಷಸೀ ಕೃತ್ಯ ಮೆರೆದಿದ್ದಾರೆ.ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಪುಲ್ವಾಮ ಬಳಿಯ ಆವಂತಿಪೊರಾ ಬಳಿ ಉಗ್ರರು ಸಿಆರ್​ಪಿಎಫ್​ ವಾಹನದ ಮೇಲೆ ಅತ್ಯುಗ್ರ ದಾಳಿ ನಡೆಸಿದ್ದು, ಸೇನಾ ವಾಹನದಲ್ಲಿ 35-40 ಮಂದಿ ಯೋಧರಿದ್ದರು.ಸದ್ಯದ ಮಾಹಿತಿ ಪ್ರಕಾರ ಹುತಾತ್ಮರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 18 ಮಂದಿ ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಜೈಷ್​ ಎ ಮಹಮ್ಮದ್​ ಸಂಘಟನೆ ಈ ರಣಹೇಡಿ ಕೃತ್ಯವನ್ನು ಎಸಗಿದ ಭಯೋತ್ಪಾದಕ ಸಂಘಟನೆ. ಹೆದ್ದಾರಿಯಲ್ಲಿ ಕಾರಿನಲ್ಲಿ ಹೊಂಚು ಹಾಕಿ ಕಾಯುತ್ತಿದ್ದ ಆದಿಲ್​ ಅಹ್ಮದ್​ ದಾರ್ ಎಂಬ ಉಗ್ರ ಸೇನಾ ವಾಹನ ಬರುತ್ತಿದ್ದಂತೆ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಈ ವೇಳೆ ಸ್ಥಳದಿಂದ ಕಾಲ್ಕಿತ್ತ ಉಗ್ರರನ್ನು ಮಟ್ಟಹಾಕಲು ಸೇನೆ ‘ಆಪರೇಷನ್​ ಆಲ್​ ಔಟ್​’ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಬಾರಾಮುಲ್ಲಾ ಜಿಲ್ಲೆ ಉಗ್ರ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಭಾರತೀಯ ಯೋಧರು ಉಗ್ರ ಸಂಹಾರಕ್ಕೆ ಪಣ ತೊಟ್ಟಿದ್ದು, ಒಬ್ಬನೇ ಒಬ್ಬ ಉಗ್ರ ಉಳಿಯ ಬಾರದು ಎಂದು ಶಪಥ ಮಾಡಿದ್ದಾರೆ.

LEAVE A REPLY

Please enter your comment!
Please enter your name here