ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್​ ಫಿನಿಶ್?

0
273

ಶ್ರೀನಗರ : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್​ ಘಾಜಿ ಅಬ್ದುಲ್​​ ರಶೀದ್​ನನ್ನು ಭಾರತೀಯ ಸೇನೆ ಹೊಡೆದುರಿಳಿಸಿದೆ ಎನ್ನುವ ಬಿಗ್​ ಅಪ್​ಡೇಟ್ ಸಿಕ್ಕಿದೆ.
ಉಗ್ರರ ಸಂಹಾರಕ್ಕೆ ಟೊಂಕ ಕಟ್ಟಿ ನಿಂತಿರುವ ಭಾರತೀಯ ಯೋಧರು ಉಗ್ರರ ನಿರ್ಣಾಮಕ್ಕೆ ಒಂದೊಂದೇ ಹೆಜ್ಜೆಯನ್ನು ಇಡುತ್ತಿದ್ದಾರೆ. ಇದೀಗ ಜೆಎಎಂ ಉಗ್ರ ಸಂಘಟನೆಯ ರಣಹೇಡಿ ಭಯೋತ್ಪಾದಕ ಘಾಜಿ ಅಬ್ದುಲ್​​ ರಶೀದ್​ನನ್ನು ಫಿನಿಶ್ ಮಾಡಿದ್ದಾರೆ.
ಇಂದು ಮತ್ತೆ ಅಟ್ಟಹಾಸ ಮೆರೆದ ಉಗ್ರರು ಪಿಂಗ್ಲಾನ್​ನಲ್ಲಿ ದಾಳಿ ನಡೆಸಿದ್ದರು. ಈ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸತತ 7 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಸೇನೆ ಪಿಂಗ್ಲಾನ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದ ಮಾಹಿತಿ ಪಡೆದು ಇಡೀ ಪ್ರದೇಶವನ್ನು ಸುತ್ತುವರೆದಿತ್ತು. ಉಗ್ರರನ್ನು ಮುಗಿಸಲು ಸೇನೆ ಬಿಲ್ಡಿಂಗನ್ನು ಉಡಾಯಿಸಿದ್ದಾರೆ. ಕಟ್ಟಡವನ್ನು ಉಡಾಯಿಸಿದ ನಂತರ ಉಗ್ರರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ಕಸ ಉಗ್ರ ಕಮಾಂಡರ್​ ಘಾಜಿ ಅಬ್ದುಲ್​ ರಶೀದ್​ ಮತ್ತು ಕಮ್ರಾನ್​ನನ್ನು ಹೊಡೆದುರುಳಿಸಿದ್ದಾರೆ ಎನ್ನಲಾಗುತ್ತಿದೆ. ತಾಲಿಬಾನ್​ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಈತ ಮಸೂದ್​ ಅಜರ್ ಆದೇಶದಂತೆ ಕಳೆದ ಡಿಸೆಂಬರ್​ನಲ್ಲಿ ಕಣಿವೆ ನಾಡಿಗೆ ಬಂದಿದ್ದ ಎನ್ನಲಾಗಿದೆ. ಐಇಟಿ (ಸುಧಾರಿತ ಸ್ಫೋಟಕ) ತಯಾರಿಕೆಯಲ್ಲಿ ಎಕ್ಸ್​ಪರ್ಟ್​ ಆಗಿದ್ದು, ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೈದ ಅದಿಲ್​ ಅಹ್ಮದ್​ ದಾರ್​ಗೆ ತರಬೇತಿ ನೀಡಿದ್ದವನು ಇವನೇ.

LEAVE A REPLY

Please enter your comment!
Please enter your name here