ಶ್ರೀನಗರ : ಪುಲ್ವಾಮಾ ದಾಳಿಗೆ ಪಾಕಿಸ್ತಾನದಿಂದಲೇ ಉಗ್ರ ಸಂದೇಶ ಬಂದಿತ್ತು ಎನ್ನುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಪುಲ್ವಾಮಾ ಘಟನೆ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಕಿಡಿಕಾರಿದಾಗ ಪಾಕ್, ‘ನಮಗೂ ಅದಕ್ಕು ಸಂಬಂಧವಿಲ್ಲ. ತಿಳ್ಕೊಂಡು ಮಾತಾಡಬೇಕು’ ಎಂದು ಪಾಕ್ ಮಾತನಾಡಿತ್ತು. ಆದರೆ, ಇದೀಗ ದಾಳಿಗೆ ಸಂದೇಶ ಬಂದಿದ್ದೇ ರಣಹೇಡಿ, ಪಾಪಿ ಪಾಕಿಸ್ತಾನದಿಂದ ಎನ್ನುವ ಖಚಿತ ಮಾಹಿತಿ ದೊರೆತಿದೆ.
ಜೈಷ್ ಎ ಮೊಹಮ್ಮದ್ ಉಗ್ರ ಸಂಘನಟೆಯ ನಾಯಕ, ಉಗ್ರ ಕಮಾಂಡರ್ ಮಸೂದ್ ಅಜರ್ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಿಂದ ದಾಳಿಗೆ ಸಂದೇಶ ಕೊಟ್ಟಿದ್ದ ಎಂಬುದು ಬಯಲಾಗಿದೆ. ಈತ ತನ್ನ ಅಳಿಯ ಮೊಹಮ್ಮದ್ ಉಸ್ಮಾನ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ದಾಳಿಗೆ ಆದೇಶಿಸಿದ್ದ ಎಂದು ತಿಳಿದು ಬಂದಿದೆ. ವೈಎಸ್ಎಂಎಸ್ ಮೂಲಕ ದಾಳಿ ನಡೆಸಿದ ಬಗ್ಗೆ ಮಸೂದ್ ಅಜರ್ ಗೆ ಮಾಹಿತಿ ರವಾನೆಯಾಗಿದೆ.
ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಮೊಹಮ್ಮದ್ ಉಸ್ಮಾನ್ನ್ನು ಕಳೆದ ವರ್ಷ ಭಾರತೀಯ ಸೇನೆ ಹೊಡೆದುರುಳಿಸಿತ್ತು.