ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದೇವೆ : ಗೃಹಸಚಿವಾಲಯಕ್ಕೆ ವರದಿ ಸಲ್ಲಿಸಿದ ಸಿಆರ್​ಪಿಎಫ್

0
256

ಶ್ರೀನಗರ : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ , ಉಗ್ರ ಕಮಾಂಡರ್​ ಘಾಜಿ ಅಬ್ದುಲ್​ ರಶೀದ್​ ಮತ್ತು ಕಮ್ರಾನ್ ಫಿನಿಶ್ ಆಗಿರೋದು ಪಕ್ಕಾ ಆಗಿದೆ.
ಘಾಜಿ ಅಬ್ದುಲ್​ ರಶೀದ್​ ಮತ್ತು ಕಮ್ರಾನ್​ ಫಿನಿಶ್​ ಆಗಿರವ ಬಗ್ಗೆ ಕೆಲವು ಗಂಟೆಗಳ ಮೊದಲೇ ವರದಿಯಾಗಿತ್ತು. ಆದರೆ, ಅದು ಖಚಿತವಾಗಿರಲಿಲ್ಲ. ಇದೀಗ ಸಿಆರ್​ಪಿಎಫ್ ಗೃಹಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದೇವೆ ಅಂತ ತಿಳಿಸಿದೆ.
ಘಾಜಿ ಅಬ್ದುಲ್ ರಶೀದ್​ ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್. ಈತ ತಾಲಿಬಾನ್​ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಮಸೂದ್​ ಅಜರ್ ಆದೇಶದಂತೆ ಕಳೆದ ಡಿಸೆಂಬರ್​ನಲ್ಲಿ ಕಣಿವೆ ನಾಡಿಗೆ ಬಂದಿದ್ದ ಎನ್ನಲಾಗಿದೆ. ಐಇಟಿ (ಸುಧಾರಿತ ಸ್ಫೋಟಕ) ತಯಾರಿಕೆಯಲ್ಲಿ ಎಕ್ಸ್​ಪರ್ಟ್​ ಆಗಿದ್ದು, ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೈದ ಅದಿಲ್​ ಅಹ್ಮದ್​ ದಾರ್​ಗೆ ತರಬೇತಿ ನೀಡಿದ್ದು ಇದೇ ರಕ್ಕಸ.

LEAVE A REPLY

Please enter your comment!
Please enter your name here