ಉಗ್ರರ ಬೇಟೆಯಲ್ಲಿ ಭಾರತೀಯ ಸೇನೆ

0
249

ಶ್ರೀನಗರ : ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸವನ್ನು ಮಟ್ಟಹಾಕಲು ಭಾರತೀಯ ಸೇನೆ ಸಕಲ ಸನ್ನದ್ಧವಾಗಿದೆ. ಉಗ್ರರನ್ನು ಸದೆಬಡಿದು ಪಾಪಿ ಪಾಕಿಸ್ತಾನಕ್ಕೆ ಖಡಕ್ ಪ್ರತ್ಯುತ್ತರವನ್ನು ನೀಡಲು ಭಾರತೀಯ ಯೋಧರು ರೆಡಿಯಾಗಿದ್ದಾರೆ.
ಪುಲ್ವಾಮಾ ಆವಂತಿಪೊರಾದಲ್ಲಿ ದಾಳಿ ನಡೆಸಿ 40 ಯೊಧರ ಜೀವ ತೆಗೆದ ರಣಹೇಡಿ ಉಗ್ರರು ಇಂದು ಮತ್ತೆ ಪುಲ್ವಾಮಾದ ಪಿಂಗ್ಲಾನ್​ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ.
ಇದೀಗ ಈ ಪಿಂಗ್ಲಾನ್​ ಪ್ರದೇಶದಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಸುತ್ತುವರೆದಿದೆ. ಸೇನಾಪಡೆ ಆ ಉಗ್ರರನ್ನು ಜೀವಂತವಾಗಿ ಸೆರೆಹಿಡಿಯುವ ಪ್ರಯತ್ನದಲ್ಲಿದ್ದು, ಪರಿಸ್ಥಿತಿ ಕೈ ಮೀರಿದರೆ ಹೊಡೆದುರುಳಿಸಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here