Home ಸಿನಿ ಪವರ್ ಕನ್ನಡದಲ್ಲಿ ಬರಲಿದೆ 'ಪುಲ್ವಾಮಾ-43'..! ಡೈರೆಕ್ಟರ್​, ಹೀರೊ ಯಾರ್ ಗೊತ್ತಾ?

ಕನ್ನಡದಲ್ಲಿ ಬರಲಿದೆ ‘ಪುಲ್ವಾಮಾ-43’..! ಡೈರೆಕ್ಟರ್​, ಹೀರೊ ಯಾರ್ ಗೊತ್ತಾ?

ಪುಲ್ವಾಮಾ ದಾಳಿ, ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕಹಿ ಘಟನೆ. ಇದಕ್ಕೆ ಪ್ರತಿಕಾರವಾಗಿ ಭಾರತ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್ ಕೂಡ ಅಚ್ಚಳಿಯದೆ ಉಳಿಯೋ ಘಟನೆಯೇ… ಈ ಘಟನೆಗಳು ಸಿನಿಮಾವಾಗಿ ಬಂದ್ರೆ ಹೇಗಿರುತ್ತೇ..? ಅದೂ ನಮ್ಮ ಕನ್ನಡದಲ್ಲಿ ಸಿನಿಮಾ ಆದ್ರೆ ಹೇಗೆ? ಅರೇ… ಪುಲ್ವಾಮಾ ಇನ್ಸಿಡೆಂಟ್ ಕನ್ನಡದಲ್ಲಿ ಚಿತ್ರವಾಗುತ್ತಾ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡಿರಾ..?

ಅದು ಹೊಸ ವರ್ಷದ ಆರಂಭ.. ಫ್ರೆಬವರಿ 14… ಪ್ರೇಮಿಗಳ ದಿನದ ಸಂಭ್ರಮ ಮನೆ ಮಾಡಿತ್ತು. ಆದರೆ, ಆ ದಿನ ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿದು ಬಿಟ್ಟಿದೆ…ರಣಹೇಡಿ ಪಾಕ್ ಪೋಷಿತ ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಅಂದು ದಾಳಿ ನಡೆಸಿದ್ರು. ಆ ದಾಳಿಯಲ್ಲಿ ದೇಶದ ಹೆಮ್ಮೆಯ 43 ಮಂದಿ ವೀರ ಯೋಧರು ಹುತಾತ್ಮರಾದರು. ಇಡೀ ಭಾರತ ಪಾಕ್ ಮತ್ತು ಅದರ ಎಂಜಲು ತಿಂದು ಬದುಕುತ್ತಿರೋ ಉಗ್ರರ ವಿರುದ್ಧ ಪ್ರತಿಕಾರದ ಧ್ವನಿ ಎತ್ತಿತ್ತು.

ಪುಲ್ವಾಮಾ ದಾಳಿ ನಡೆದ ಎರಡೇ ಎರಡು ದಿನಕ್ಕೆ ಭಾರತ ಪ್ರತಿಕಾರವನ್ನು ತೀರಿಸಿಕೊಳ್ಳುವುದರ ಜೊತೆ ಜೊತೆಗೇ ಪಾಪಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿತು. ಭಾರತದ ತಂಟೆಗೆ ಬಂದ್ರೆ ‘ನೀವು ಪೋಷಿಸುತ್ತಿರೋ ಉಗ್ರರು ಉಳಿಯಲ್ಲ.. ನಿಮ್ಮ ದೇಶವೂ ಇರಲ್ಲ’ ಅನ್ನೋ ಎಚ್ಚರಿಕೆಯ ಕಾಲಿಂಗ್ ಬೆಲ್ ಅನ್ನು ಭಾರತ ಪಾಕ್ ಗೆ ಬಡಿದಿತ್ತು. ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್​, ಮುಜಾಫರಾ ಬಾದ್, ಚಾಕೊಟಿ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು.

 ಬಾಲಾಕೋಟ್​ ಏರ್​​ಸ್ಟ್ರೈಕ್​​ ಬಳಿಕ ಪಾಕ್ ಭಾರತದ ಮೇಲೆ ಮರು ದಾಳಿಗೆ ಯತ್ನಿಸಿತು. ಆ ವೇಳೆ ಮಿಗ್ 21 ಮೂಲಕ ಭಾರತ ಪಾಕ್​ನ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ನಿಮ್ಮ ಆಟ ನಮ್ಮತ್ರ ನಡೆಯಲ್ಲ ಹೇಡಿಗಳಾ…ಅಂತ ಮತ್ತೊಂದು ತಿರುಗೇಟು ನೀಡಿತ್ತು. ಆ ಅಟ್ಯಾಕ್ ಸಂದರ್ಭದಲ್ಲಿ ಭಾರತದ ಯೋಧ ಅಭಿನಂದನ್ ಆಕಸ್ಮಿಕವಾಗಿ ಪಾಕ್​ ಸೆರೆಯಾಗಿದ್ದರು. ಭಾರತ ಸೇರಿದಂತೆ ಜಾಗತಿಕ ಒತ್ತಡಕ್ಕೆ ಮಣಿದು ಪಾಕ್ ಅಭಿನಂದನ್ ಅವರನ್ನು ತೆಪ್ಪಗೆ ಭಾರತಕ್ಕೆ ಕಳುಹಿಸಿಕೊಟ್ಟಿದ್ದೂ ಇತಿಹಾಸ..!

ಈ ಎಲ್ಲಾ ಘಟನೆಗಳು ಒಂದು ಸಿನಿಮಾವಾದರೆ ಹೇಗಿರುತ್ತೇ..? ಅದೂ ನಮ್ಮ ಕನ್ನಡದಲ್ಲೇ ಸಿನಿಮಾ ಆದ್ರೆ ಹೇಗೆ? ಹು.. ಕನ್ನಡದಲ್ಲಿ ಪುಲ್ವಾಮಾ ದಾಳಿಗೆ ಸಂಬಂಧಿಸಿದ ಸಿನಿಮಾ ಬರ್ತಾ ಇದೆ. ದೇಶ ಭಕ್ತಿ ಸಾರುವ ಅದೆಷ್ಟೋ ಚಿತ್ರಗಳು ಬಂದಿವೆ. ಬಾಲಿವುಡ್ ನಲ್ಲಿ ಇತ್ತೀಚೆಗೆ ಬಂದ ‘ಉರಿ’ ಅದಕ್ಕೊಂದು ಹೊಸ ಸೇರ್ಪಡೆ. ಆದರೆ ಕನ್ನಡದಲ್ಲಿ ಇಂಥಾ ಸಿನಿಮಾ ಬಂದಿಲ್ಲ. ಈಗ ಪುಲ್ವಾಮಾ ಬಗ್ಗೆ ಮೂವಿ ಬರ್ತಾ ಇದೆ.

ಹೌದು, ಈ ಬಗ್ಗೆ ಕನ್ನಡದ ಸ್ಟಾರ್ ಡೈರೆಕ್ಟರ್ ಒಬ್ಬರು ‘ಪುಲ್ವಾಮಾ@43’ ಅನ್ನೋ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಅವರು ತಮ್ಮ ಹೆಸರನ್ನು ಇಷ್ಟು ಬೇಗ ರಿವೀಲ್ ಮಾಡೋದು ಬೇಡ ಅಂತನೂ ಹೇಳಿದ್ದು.. ಹೀಗಾಗಿ ಅವರು ಯಾರು ಅನ್ನೋದು ಇನ್ನು ತಿಳಿದುಬಂದಿಲ್ಲ. ಆದರೆ, ಚಿತ್ರದ ಹೆಸರು ನೋಂದಣಿ ಆಗಿರುವುದರಂತೂ ಪಕ್ಕಾ. ಅದರಲ್ಲಿ ಡೌಟೇ ಬೇಡ.
ಇನ್ನು ಸಿನಿಮಾ ಮಾಡಿ ಕೋಟಿ ಕೋಟಿ ಲಾಭ ಮಾಡೋದು ಅವರ ಉದ್ದೇಶವಲ್ಲ. ಆ ಸಿನಿಮಾದಿಂದ ಬಂದ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡೋದು ಅವರ ಉದ್ದೇಶ.

ಜೊತೆಗೆ ಕನ್ನಡದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಪುಲ್ವಾಮಾ ಅಟ್ಯಾಕ್ ಕುರಿತ ಸಿನಿಮಾ ಬರಲಿದೆ. ಸಂಜಯ್ ಲೀಲಾ ಬನ್ಸಾಲಿ ವಿಂಗ್ ಕಮಾಂಡರ್ ಅಭಿನಂದನ್ ಸಾಹಸದ ಕುರಿತ ಸಿನಿಮಾ ನೀಡಲು ಮುಂದಾಗಿದ್ದಾರೆ. ‘ಪುಲ್ವಾಮಾ’, ‘ಏರ್ ಸ್ಟ್ರೈಕ್’ , ‘ವಿಂಗ್ ಕಮಾಂಡರ್’ , ‘ಹೌ ಈಸ್ ದ ಜೋಶ್’, ? ‘ಮಿಗ್ 21’ ಟೈಟಲ್​​​ಗಳನ್ನು ಬಾಲಿವುಡ್ ನ ಕೆಲವರು ರಿಜಿಸ್ಟರ್ ಮಾಡಿಸಿದ್ದಾರೆ.

ಒಟ್ಟಿನಲ್ಲಿ ಪುಲ್ವಾಮಾ ದಾಳಿ ಚಿತ್ರವಾಗಿ ಮೂಡಿ ಬರ್ತಾ ಇದೆ. ಸ್ಯಾಂಡಲ್ ವುಡ್ ನಲ್ಲೇ ಆದಷ್ಟು ಬೇಗ ಬರಲಿ.. ಸ್ಯಾಂಡಲ್ ವುಡ್ ನ ಆ ಚಿತ್ರ ವಿಶ್ವಮಟ್ಟದಲ್ಲಿ ಸದ್ದು ಮಾಡಲಿ. ಕನ್ನಡ ಚಿತ್ರರಂಗದ ಬ್ರಾಂಡ್ ವ್ಯಾಲ್ಯುವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಅಂತ ಆಶಿಸೋಣ.

-ಚರಿತ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments