ಬೆಂಗಳೂರು: ಲಾಕ್ಡೌನ್ನಿಂದಾಗಿ ಈಗಾಗಲೇ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯದೇ ಕೊನೆಯ ಒಂದು ಪರೀಕ್ಷೆ ಉಳಿದುಕೊಂಡಿದೆ. ಆದರೆ ಈಗ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದ್ದು, ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲಿಂದಲೇ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗ್ತಿದೆ.
ಲಾಕ್ಡೌನ್ ಆಗಿದ್ದರಿಂದ ಪರೀಕ್ಷೆಗಳು ನಡೆಯದೇ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ತೆರಳಿರಬಹುದು. ದ್ವಿತೀಯ ಪಿಯುಸಿ ಬಾಕಿ ಇರುವ ಇಂಗ್ಲೀಷ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಅವರು ಇರುವಲ್ಲಿಂದಲೇ ಪರೀಕ್ಷೆ ಬರೆಯಲು ಅವಕಾಶಗಳನ್ನು ಒದಗಿಸಲಾಗ್ತಿದೆ. ಮನೆಗಳಿಗೆ ಹೋಗಿದ್ದರೆ ಅದೇ ಜಿಲ್ಲೆಯಲ್ಲಿ ಎಕ್ಸಾಂಗೆ ಅವಕಾಶ ನೀಡಿದ್ದು, ಅವರ ಸ್ವಂತ ಜಿಲ್ಲೆ, ತಾಲೂಕಿನಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲಿಂದಾಲೇ ಪರೀಕ್ಷೆಗಳನ್ನು ಬರೆಯಲು ಅವರಿರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಇಲಾಖೆ ಆದೇಶ ನೀಡಿದೆ. ಈ ಬಗ್ಗೆ ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ddtt.pue@gmail.com ಗೆ ಮೇಲ್ ಮಾಡುವಂತೆ ಸೂಚನೆ ನೀಡಲಾಗಿದೆ.
1inventory