ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..? ಇಲ್ಲಿ ಎಷ್ಟು ಪಬ್ ಗಳಿವೆ ಅಂದ್ರೆ..?!

0
314

ಭಾರತದ ಪ್ರತಿಯೊಂದು ರಾಜ್ಯ,‌ ಪ್ರದೇಶಗಳು ತಮ್ಮದೇ ಆದ ವಿಶೇಷತೆ ಹೊಂದಿವೆ.‌ ನಮ್ ದೇಶದ ಬಗ್ಗೆ ಎಷ್ಟು ತಿಳಿದುಕೊಂಡ್ರೂ ಕೂಡ ಕಮ್ಮಿನೇ!

ಸಾಕಷ್ಟು ವಿಚಾರಗಳಿವೆ, ಅವೆಲ್ಲಾ ಹಾಗಿರಲಿ. ಈಗ ಡೈರೆಕ್ಟ್ ಆಗಿ ವಿಷ್ಯಕ್ಕೆ ಬರೋಣ‌.ನಿಮ್ಗೆ ನಮ್ಮ ದೇಶದ ಪಬ್ ಕ್ಯಾಪಿಟಲ್( ಪಬ್ ರಾಜಧಾನಿ) ಯಾವ್ದು ಅಂತ ಏನಾದ್ರು ಗೊತ್ತಿದ್ಯಾ? ದೆಹಲಿ, ಮುಂಬೈ, ಹೈದರಾಬಾದ್..? ಊಹ್ಞೂಂ ಉಹ್ಞೂಂ ಇವ್ಯಾವ್ದೂ ಅಲ್ಲ..!

ದೇಶದ ಪಬ್ ಕ್ಯಾಪಿಟಲ್  ನಮ್ಮ ಬೆಂಗಳೂರೇ..!

ಯಸ್, ಸಿಲಿಕಾನ್ ಸಿಟಿ, ಏರ್ ಕಂಡೀಶನ್ಡ್ ಸಿಟಿ, ವಾಣಿಜ್ಯ ನಗರಿ, ಸಿಟಿ ಆಫ್ ಗಾರ್ಡನ್ಸ್, ಫೈನಾನ್ಶಿಯರ್ಸ್ ಪ್ಯಾರಡೈಸ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಅಂತ ಕರೆಸಿಕೊಳ್ಳೋ ನಮ್ಮ ಬೆಂಗಳೂರು ‘ಪಬ್ ಕ್ಯಾಪಿಟಲ್ ‘ ಕೂಡ.   ನಮ್ ಬೆಂಗಳೂರಲ್ಲಿ ಸುಮಾರು 800ಕ್ಕೂ ಹೆಚ್ಚಿನ ಪಬ್ ಗಳಿವೆ.ಇಷ್ಟೊಂದು ಪಬ್ ಗಿಳಿವೆಯಾ ಅಂತ ನಿಮ್ಗೆ ಆಶ್ಚರ್ಯ ಆಗ್ಬಹುದು. ‌

ದೊಡ್ದ ದೊಡ್ಡ ಕಂಪನಿಗಳು ತಲೆ ಎತ್ತಿ, ದೇಶದ ಮೂಲೆ ಮೂಲೆ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಂದ ಕೂಡ ಜನ ಬಂದು ಬೆಂಗಳೂರು ಸೇರ್ತಿದ್ದಾರೆ. ಇದ್ರಿಂದ ಗೊತ್ತೋ ಗೊತ್ತಿಲ್ದೆನೋ ಫಾರಿನ್ ಕಲ್ಚರ್ ಗೆ ಬೆಂಗಳೂರಿಗರು ಮೊರೆ ಹೋಗ್ತಿದ್ದಾರೆ.  ಇದ್ರಿಂದ ಪಬ್ & ನೈಟ್ ಲೈಫ್ ಕಲ್ಚರ್ ಭಾರತದ ಬೇರೆ ಸಿಟಿಗಳಿಗಿಂತ ವೇಗವಾಗಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ತಲೆ ಎತ್ತಿದೆ. ನಮ್ ಬೆಂಗಳೂರಿಗೆ `ಪಬ್ ಕ್ಯಾಪಿಟಲ್’ ಅಂತ ಪಟ್ಟಕೂಡ‌ ಸಿಕ್ಕಿದೆ.

LEAVE A REPLY

Please enter your comment!
Please enter your name here