ಪ್ರತಿಭಟನಾನಿರತರಿಗೆ ಹಲ್ಲೆ ಮಾಡಿದ ಪಿಎಸ್​ಐ

0
210

ಚಿಕ್ಕೋಡಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ‌ ಹಾರೂಗೇರಿಯಲ್ಲಿ ಪುರಸಭೆ ಎದುರು ಪ್ರತಿಭಟನೆ ನಡೆಸುತ್ತಿದ್ದವರನ್ನು ಪಿಎಸ್​ಐ ಕುಮಾರ್ ಹಿತ್ತಲಮನಿ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಪ್ರತಿಭಟನಾಕಾರರ ಮಧ್ಯೆ ಗಲಾಟೆ ನಡೆದಿದ್ದು ಪಿಎಸ್​ಐ ಅವರು ಇಬ್ಬರು ಪ್ರತಿಭಟನಾ ನಿರತರಿಗೆ ಹಲ್ಲೆ ಮಾಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಲು ಪುರಸಭೆ ಮುಖ್ಯಾಧಿಕಾರಿ ನಿರಾಕರಿಸಿದ್ದಾರೆ. ಪೊಲೀಸರ ದರ್ಪ ಕಂಡು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಆದರೆ ಎಸ್​ಪಿ ಅವರು ಘಟನೆ ಬಗ್ಗೆ ಮಾಹಿತಿಯೇ ಇಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here