ಕಲಬುರಗಿ: ರಾಜ್ಯದ 545 PSI ಹುದ್ದೆಗಳ ನೇಮಕಾತಿ ಕರ್ಮಕಾಂಡ ಬಗೆದಷ್ಟೂ ಬಯಲಾಗ್ತಿದೆ. ಇತ್ತ ಇಡೀ ಹಗರಣದ ರೂವಾರಿ ಎನ್ನಲಾಗ್ತಿರೋ ಜ್ಞಾನಜ್ಯೋತಿ ಶಾಲೆ ಮುಖ್ಯೋಪಾಧ್ಯಾಯ ಮೊಬೈಲ್ ಸ್ವಿಚಾಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಕಾಂಗ್ರೆಸ್ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದ್ದು, ಹೋರಾಟಕ್ಕೆ ಮುಂದಾಗಿದೆ. ಇತ್ತ ಪಕ್ಷಕ್ಕೂ ಆರೋಪಿಗೂ ಸಂಬಂಧ ಇಲ್ಲ ಅಂತ ಬಿಜೆಪಿ ಹೇಳುತ್ತಿದೆ.
545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ದಿನ ದಿನಕ್ಕೂ ಒಂದೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.ಇನ್ನು ಕಲಬುರಗಿ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಈ ಪ್ರಕರಣದ ಮುಖ್ಯ ರೂವಾರಿ ಎನ್ನಲಾಗ್ತಿದ್ದು, PSI ಪರೀಕ್ಷಾ ವೇಳೆ ಎಂಟು ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮುಂಚಿತವಾಗಿ ಮೇಲ್ವಿಚಾರಕಿಯರಿಗೆ ಕೀ ಆನ್ಸರ್ಗಳನ್ನ ನೀಡಿದ್ದಾನೆಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಆರೋಪಿ ಕಾಶಿನಾಥ್ ಅಣತಿಯಂತೆ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ, ಸಾವಿತ್ರಿ ಅಭ್ಯರ್ಥಿಗಳು ಬರೆದಿದ್ದ OMR ಶೀಟ್ನಲ್ಲಿ ಉತ್ತರಗಳನ್ನ ಟಿಕ್ ಮಾಡಿದ್ದಾರೆ ಎನ್ನಲಾಗಿದೆ.ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಶಿನಾಥ್ ಮತ್ತು ಸಹಶಿಕ್ಷಕಿ ಅರ್ಚನಾ ತಲೆ ಮರೆಸಿಕೊಂಡಿದ್ದು, ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೂ ಆರೋಪಿ ದಿವ್ಯಾ ಹಾಗರಗಿಗೂ ಪಕ್ಷಕ್ಕೂ ದಿವ್ಯಾ ಹಾಗರಗಿಗೂ ಯಾವುದೇ ಸಂಬಂಧವಿಲ್ಲ ಅಂತಾ ಬಿಜೆಪಿ ಸ್ಪಷ್ಟಪಡಿಸಿದೆ.
ಇನ್ನು ಇತ್ತ ಬಿಜೆಪಿ ನಡೆಗೆ ಕಾಂಗ್ರೆಸ್ ಕೆರಳಿಕೆಂಡವಾಗಿದೆ. ಪ್ರಕರಣವನ್ನ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಹಗರಣದಲ್ಲಿ ತಮ್ಮದೇ ಪಕ್ಷದ ನಾಯಕಿ ಶಾಮೀಲಾಗಿದ್ದರೂ ಪಕ್ಷಕ್ಕೂ ದಿವ್ಯಾಗೂ ಸಂಬಂಧವಿಲ್ಲ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಅಂತಾ ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹರಗರಣದ ಮಾಸ್ಟರ್ ಮೈಂಡ್ ಕಾಶಿನಾಥ್ ಮತ್ತು ಶಾಲೆಯ ಮಾಲೀಕರಾದ ದಿವ್ಯಾ ಹಾಗರಗಿಯ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಪ್ರತಿಭಾವಂತರ ಬಾಳಿಗೆ ಕೊಳ್ಳಿ ಇಡಲು ಮುಂದಾಗಿರೋ ಇಂಥವರಿಗೆ ಕಠಿಣ ಶಿಕ್ಷೆ ಆಗಲಿ ಅನ್ನೋದು ಸಾರ್ವಜನಿಕರ ಆಗ್ರಹ.