Sunday, May 29, 2022
Powertv Logo
Homeರಾಜ್ಯPSI ನೇಮಕಾತಿ ಅಕ್ರಮದ ಸ್ಫೋಟಕ ಆಡಿಯೋ ವೈರಲ್​​

PSI ನೇಮಕಾತಿ ಅಕ್ರಮದ ಸ್ಫೋಟಕ ಆಡಿಯೋ ವೈರಲ್​​

ಕಲಬುರಗಿ : ‘ನೊಂದ ಪಿಎಸ್‌ಐ ಅಭ್ಯರ್ಥಿಗಳ ವಾಟ್ಸಪ್ ಗ್ರೂಪ್‌‘ಗಳಲ್ಲಿ ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆಯಾಗಿದ್ದು, ಭಾರಿ ವೈರಲ್ ಆಗುತ್ತಿದೆ. ಆದರೆ ಆಡಿಯೋದಲ್ಲಿ ಯಾರು ಯಾರ ಜೊತೆ ಸಂಭಾಷಣೆ ಮಾಡಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಈ ಆಡಿಯೋನ ಶಾಸಕ ಪ್ರಿಯಾಂಕ್​ ಖರ್ಗೆಯಿಂದ ರಿಲೀಸ್ ಮಾಡಿದ್ದಾರೆ. ​

ತಮ್ಮ ವ್ಯಕ್ತಿಯೊಬ್ಬರು ಪಿಎಸ್‌ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು, ಸಿದ್ದರಿದಾರೆಂದು ಹೇಳಿರುವ ವ್ಯಕ್ತಿ. ಒಳ್ಳೆ ಶ್ರೀಮಂತರು ಎಂಬ ಮಾತುಗಳು ಕೇಳಿ ಬರುತ್ತಿವೆ
ಮತ್ತೊಬ್ಬ ವ್ಯಕ್ತಿಯಿಂದ.. ಏನೂ ಆಗೋಲ್ಲ.. ಇದರಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ. ಜಾಸ್ತಿ ಅವರೇ ಶಾಮೀಲಾಗಿದ್ದಾರೆ ಎಂದು ಹೇಳಿದ್ದಾರೆ.

ಆಡಿಯೋದಲ್ಲಿ ಆ ಇಬ್ಬರ ವ್ಯಕ್ತಿಗಳ ಮೊಬೈಲ್ ಸಂಭಾಷಣೆಯ ವಿವರಣೆ

ವ್ಯಕ್ತಿ-1 ನಮಸ್ಕಾರ್ರಿ ಸರ…
ವ್ಯಕ್ತಿ-2 ನಮಸ್ಕಾರ್ ಪಿಎಸ್‌ಐ ಸಾಬ್ರಿಗೆ..

ವ್ಯಕ್ತಿ-1 ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದಾರಂತೆ?
ವ್ಯಕ್ತಿ-2 ವರ್ಷಾ ಇದ್ದುದ್ದೇ.. ಅದೆನ್ ಆಗೋಲ್ಲ..

ವ್ಯಕ್ತಿ-1 2004 ರ ಕೆಎಎಸ್‌ನಲ್ಲಿ ಆದಂತೆ ಮತ್ತೆನಾದರೂ..
ವ್ಯಕ್ತಿ-2 ಏನು ಆಗೋಲ್ಲ.. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ.. ಜಾಸ್ತಿಯಿದಾರೆ..ದೊಡ್ಡವರೇ ಶಾಮೀಲಾಗಿದಾರೆ.. ಗೌಡ್ರೆ ನಮ್ಮವರು ಒಬ್ರಿದಾರೆ.. ದುಡ್ಡು ಸಾಕಷ್ಟಿದೆ..

ವ್ಯಕ್ತಿ-1 ಈ ಸರ್ತಿ ಆಗೋಲ್ಲ, 402 ಗೆ ಹಾಕಿ.. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್‌ನಿಂದ ಮಾಡಲಿ..ಸೆಂಟರ್ ಹಾಕಿಸಿಕೊಂಡು ಬರಬೇಕು..
ವ್ಯಕ್ತಿ-2 ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್‌ನಿಂದ ಆಪ್ಲಿಕೇಶನ್ ನಂಬರ್‌ನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ..

ವ್ಯಕ್ತಿ-1 ಆಯ್ತು..

545 ಪಿಎಸ್‌ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ

402 ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೆ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನ ಬೇಗನೇ ಕಳುಹಿಸಿ

ಹೀಗೆ ಹಲವು ಸಂಭಾಷಣೆಗಳನ್ನ ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisment -

Most Popular

Recent Comments