ಬೆಂಗಳೂರು: ಸತತ ಮೂರು ದಿನಗಳಿಂದ ಸಾರಿಗೆ ನೌಕರರು ಸರಕಾರದ ಮುಂದೆ 10 ಬೇಡಿಕೆಗಳು ಇಟ್ಟು ಮುಷ್ಕರ ನಡೆಸುತ್ತಿದ್ದರು. ಆದರೆ ಸಾರಿಗೆ ನೌಕರರ ಮುಷ್ಕರಕ್ಕೆ ಮಣಿದ ಸರಕಾರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಗೆ ನೀಡಿದೆ.
9 ಬೇಡಿಕೆಗಳು ಈ ಕೆಳಗಿನಂತಿವೆ
- ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ ಜಾರಿಗೆ ತೀರ್ಮಾನ
- ಕೋವಿಡ್ನಿಂದ ಮೃತಪಟ್ಟರೆ 30ಲಕ್ಷ ರೂ. ಪರಿಹಾರ ನೀಡಲಾಗುವುದು
- ಅಂತರ್ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ನಿರ್ಧಾರ
- ನೌಕರರ ತರಬೇತಿ ಅವಧಿಯನ್ನು 2ವರ್ಷದಿಂದ 1ವರ್ಷಕ್ಕೆ ಇಳಿಕೆ
- ನಿಗಮದಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೊಳಿಸುತ್ತೇವೆ
- ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ವೇಳೆ ಭತ್ಯ ಕೊಡಲು ತೀರ್ಮಾನ
- ಸಾರಿಗೆ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
- NINC ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು
- 6ನೇ ವೇತನ ಆಯೋಗದ ಶಿಫಾರಸು ಪರಿಗಣಿಸಿ ವೇತನ ಪರಿಷ್ಕರಣೆ