ಬೆಂಗಳೂರು: ಮೌರ್ಯ ಸರ್ಕಲ್ ನಿಂದ ಪ್ರೀಡಂ ಪಾರ್ಕ್ ವರೆಗೆ ಖಾಸಗಿ ಶಾಲೆಗಳ ಒಕ್ಕೂಟದ ಬೃಹತ್ ಪ್ರತಿಭಟನೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾಋ ವಿರುದ್ಧ ಪ್ರತಿಭಟನೆ. ರುಪ್ಸಾ ಅಧ್ಯಕ್ಷ ತಾಳಿಕಟ್ಟೆ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಖಾಸಗಿ ಶಾಲೆ ಒಕ್ಕೂಟದ ಬೇಡಿಕೆಗಳು
- ಸಂಕಷ್ಟದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ಘೋಷಣೆ ಮಾಡಬೇಕು
- ಕನಿಷ್ಠ ಒಂದು ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕು
- ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳ 10 ಸಾವಿರ ನೀಡಬೇಕು
- 1985 ರಿಂದ ಅನುದಾನ ರಹಿತ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು
- 10-11-2020 ರಂದು ಹೊರಡಿಸಿರುವ ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯ
- ಶಾಲೆಗಳ ಮಾನ್ಯತೆ ನವೀಕರಣವನ್ನ ಅದಾಲತ್ ರೂಪದಲ್ಲಿ ವಿಲೇವಾರಿ ಮಾಡಬೇಕು
- ಗಡಿಭಾಗದ ಶಾಲೆಗಳ ಮುಚ್ಚುವ ನಿರ್ಧಾರ ಹಿಂಪಡೆಯಬೇಕು
- 2020-21ನೇ ಸಾಲಿನ ಆರ್.ಟಿ.ಇ ಹಣ ಒಂದೇ ಕಂತಿನಲ್ಲಿ ಮರು ಪಾವತಿ ಮಾಡಬೇಕು
- ಆರ್.ಟಿ.ಇ ಪುನರ್ ಅನುಷ್ಠಾನಕ್ಕೆ ತರುವಂತೆ ಖಾಸಗಿ ಶಾಲೆಗಳ ಒತ್ತಾಯ