Saturday, May 28, 2022
Powertv Logo
Homeರಾಜ್ಯಸರ್ಕಾರದ ವಿರುದ್ಧ ಬಿಸಿಯೂಟ ಕಾರ್ಯಕರ್ತರ ಹೋರಾಟ

ಸರ್ಕಾರದ ವಿರುದ್ಧ ಬಿಸಿಯೂಟ ಕಾರ್ಯಕರ್ತರ ಹೋರಾಟ

ಬೆಂಗಳೂರು : 60 ವರ್ಷದ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತೆರ ನಿವೃತ್ತಿ ಸರ್ಕಾರದ ಆದೇಶ ವಿಚಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮುಂದೆ ಧರಣಿಯನ್ನು ಮಾಡಿದ್ದಾರೆ.

ಅಕ್ಷರ ದಾಸೋಹ ನೌಕರ ಸಂಘ ನೇತೃತ್ವದಲ್ಲಿ ಹೋರಾಟ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಬಾಗಿಯಾಗಿದ್ದರು. 60 ವರ್ಷದ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತೆರ ನಿವೃತ್ತಿ ಸರ್ಕಾರದ ಆದೇಶ ವಿಚಾರಕ್ಕೆ ಹೋರಾಟ ಮಾಡುತಿದ್ದು, ನಿವೃತ್ತಿ ಹೆಸರಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡ್ತಿದ್ದಾರೆ.

2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ವೇಳೆ ವಿದ್ಯಾಭ್ಯಾಸ ಹಾಗೂ ವಯಸ್ಸಿನ ಅರ್ಹತೆ ಮಾತ್ರ ಇತ್ತು. ಅದರಲ್ಲಿ ನಿವೃತ್ತಿ ವಯಸ್ಸಿನ ಸರ್ಕಾರದ ಕೈಪಿಡಿ ಇರಲಿಲ್ಲ 2016ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ.

ಸರ್ಕಾರ ಏಕಾಏಕಿ 60 ವರ್ಷ ‌ ಮೇಲ್ಪಟ್ಟ ನೌಕರರನ್ನ ನಿವೃತ್ತಿ ಮಾಡುತ್ತಿರುವುದು ಅಮಾನವೀಯ,‌ ಮಹಿಳಾ ವಿರೋಧಿ ಧೋರಣೆ 12000 ನೌಕರರ ಕೆಲಸವನ್ನು ಯಾವುದೇ ನಿವೃತ್ತಿ ಸೌಲಭ್ಯ ಇಲ್ಲದೆ ತೆಗೆದುಹಾಕಲು ಮುಂದಾಗಿದೆ. ಹೀಗಾಗಿ ಈ ಆದೇಶವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ನೀವು ನಿವೃತ್ತಿ ನಿಗಧಿ ಮಾಡಿದ್ರೆ ನೌಕರರಿಗೆ ನಿವೃತ್ತಿ ವೇತನ 1 ಲಕ್ಷ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

- Advertisment -

Most Popular

Recent Comments