Homeದೇಶ-ವಿದೇಶ‘ಕೃಷಿ ಕಾಯ್ದೆ ವಿರೋಧಿಸಿ ಮತ್ತೆ ಸಿಡಿದೆದ್ದ ರೈತರು’

‘ಕೃಷಿ ಕಾಯ್ದೆ ವಿರೋಧಿಸಿ ಮತ್ತೆ ಸಿಡಿದೆದ್ದ ರೈತರು’

ಬೆಂಗಳೂರು: ಕೇಂದ್ರದ ಮೂರು ನೂತನ ಕಾನೂನುಗಳ ವಾಪಸ್ಸಾತಿಗೆ ಆಗ್ರಹಿಸಿ ನಾಳೆ ದೇಶಾದ್ಯಂತ ಚಕ್ಕಾ ಜಾಮ್ ಚಳುವಳಿ ನಡೆಯಲಿದೆ. ಭಾರತೀಯ ಕಿಸಾನ್ ಯೂನಿಯನ್ ನೀಡಿರುವ ಕರೆಗೆ ರಾಷ್ಟ್ರ ವ್ಯಾಪಿ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ.

ಕಳೆದ ಎಪ್ಪತ್ತರಡು ದಿನಗಳಿಂದ ದೆಹಲಿಯ ಗಡಿಗಳಲ್ಲಿ ಕೇಂದ್ರದ  ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಾಳೆ ದೇಶಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡೆಯಲಿರುವ ಚಕ್ಕಾ ಜಾಮ್ ಚಳುವಳಿಗೆ ದೇಶಾದ್ಯಂತ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಚಳುವಳಿ ಸಂಜೆ 3 ಗಂಟೆಯ ತನಕ ನಡೆಯಲಿದೆ.

ಹೋರಾಟ ಆರಂಭವಾದಾಗಿನಿಂದ ಇದುವರಗೆ 100 ಕ್ಕೂ ಹೆಚ್ಚು ರೈತರು ಕಾಣೆಯಾಗಿದ್ದಾರೆ. ರೈತರು ಮತ್ತು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್‌ನೆಟ್ ಸ್ಥಗಿತ, ಹೋರಾಟಗಾರರಿಗೆ ಕಿರುಕುಳ, ಪ್ರತಿಭಟನಾ ಸ್ಥಳಗಳ ವಿದ್ಯುತ್ ಮತ್ತು ನೀರು ಸರಬರಾಜನ್ನು ನಿಲ್ಲಿಸಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಲು ರೈತರು ಈ ಚಕ್ಕಾ ಜಾಮ್ ಚಳವಳಿಗೆ ಕರೆ ನೀಡಿದ್ದಾರೆ.

ಜನವರಿ ಇಪ್ಪತ್ತಾರರ ಗಲಭೆಯ ಬಳಿಕ ದೆಹಲಿಯ ಗಡಿಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಹಂತದಲ್ಲೂ ರೈತರು ದೆಹಲಿ ಪ್ರವೇಶ ಮಾಡದಂತೆ ಮುಳ್ಳಿನ ತಂತಿಯುಳ್ಳ ಬೇಲಿಗಳನ್ನು ಗಡಿಗಳಲ್ಲಿ ಅಳವಡಿಸಲಾಗಿದೆ. ಅತೀ ಹೆಚ್ಚು ಚರ್ಚೆಗೆ ಒಳಪಟ್ಟುದ್ದ ಘಾಜಿಪುರ ಗಡಿಯಲ್ಲಿ ಏಳು ಸುತ್ತಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಇನ್ನೂ ರೈತರ ಹೆಸರಿನಲ್ಲಿ ಜನವರಿ 26 ರಂದು ನಡೆದಿದ್ದ ಗಲಭೆಗಳ ರೀತಿ, ನಾಳೆ ದಂಗೆಗಳು ನಡೆಯಬಾರದೆಂದು ರೈತ ಮುಖಂಡರು ದೇಶಾದ್ಯಂತ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.   

LEAVE A REPLY

Please enter your comment!
Please enter your name here

- Advertisment -

Most Popular

Recent Comments