ತುಮಕೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
6 ಎಸ್ಪಿ, 6 ಎಎಸ್ಪಿ, 10 ಡಿವೈಎಸ್ಪಿ, 32 ಸಿಪಿಐ, 66 ಪಿಎಸ್ಐ,80 ಟ್ರಾಫಿಕ್ ಪೋಲೀಸರು ಹಾಗೂ 50 ಮಹಿಳಾ ಪೇದೆಗಳು ಸೇರಿದಂತೆ 1300 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಭಧ್ರತೆಯ ನೇತೃತ್ವವನ್ನು ಕೇಂದ್ರವಲಯದ ಐಜಿಪಿ ಶರತ್ ಚಂದ್ರ ವಹಿಸಿಕೊಂಡಿದ್ದಾರೆ. ಅಲ್ಲದೆ ಮೋದಿಗೆ ಎಸ್ ಪಿ ಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭಧ್ರತೆಯಿದ್ದು, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿ ಕೂಡ ಹೆಚ್ಚಿನ ನಿಗಾವಹಿಸಿದ್ದಾರೆ.