ಬೆಂಗಳೂರು: ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದ ಹಿನ್ನಲೆ ಆನ್ ಲೈನ್ ಕ್ಲಾಸ್ ಬಂದ್ ಮಾಡಲು ರುಪ್ಸಾ ಖಾಸಗಿ ಶಾಳೆಗಳ ಒಕ್ಕೂಟ ನಿರ್ಧರಿಸಿವೆ.
ಈ ಹಿಂದೆ ತಮ್ಮ ಬೇಡಿಕೆಗಳುನ್ನು ಈಡೇರಿಸುವಂತೆ ರುಪ್ಸಾ ಸರ್ಕಾರಕ್ಕೆ ಲೋಖೇಶ್ ತಾಳಿಕೋಟಿ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಡಿ.10ನೇ ತಾರೀಕು ಸರ್ಕಾರಕ್ಕೆ ಗಡವು ಸಹ ನೀಡಲಾಗಿತ್ತು. ಇದೀಗ ಅಂತಿಮವಾಗಿ ಹತ್ತು ಸಾವಿರ ಖಾಸಗಿ ಶಾಲೆಗಳನ್ನು ಮುಚ್ಚಿ ಪ್ರತಿಭಟನೆಗೆ ನಡೆಸಲು ನಿರ್ಧಾರ. ಶಾಲೆಗಳ ಬಂದ್ ನಿಂದ ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ತೊದರೆಯಾಗಲಿದೆ ಎಂದು ರುಪ್ಸಾ ಖಾಸಗಿ ಶಾಲಾ ಒಕ್ಕೂಟದ ರಾಜ್ಯಾಧ್ಯಕ್ಷ ಹೇಳಿದ್ದಾರೆ.