ಕೊರೋನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.
ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನತಾ ಕರ್ಫ್ಯೂ ಜಾರಿ ಆಗಲಿ. ಯಾರೂ ಕೂಡ ರಸ್ತೆಗಿಳಿಯಬೇಡಿ. ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಿ. ಎನ್ಸಿಸಿ, ಎನ್ಎಸ್ಎಸ್ ಮೊದಲಾದ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಈ ಬಗ್ಗೆ ಇಂದಿನಿಂದ ಭಾನುವಾರದವರೆಗೆ ಮಾಹಿತಿ ನೀಡಲಿ. ಜನ ಫೋನ್ ಮಾಡಿ ಬೇರೆಯವರಿಗೆ ವಿಷಯ ತಿಳಿಸಲಿ ಎಂದು ಮನವಿ ಮಾಡಿದರು. ಅಂದು ಸಂಜೆ 5 ಗಂಟೆಗೆ ಮನೆ ಬಾಗಿಲು, ಕಿಟಕಿ, ಬಾಲ್ಕನಿ ಬಳಿ 5 ನಿಮಿಷ ನಿಂತು ಚಪ್ಪಾಳೆ ತಟ್ಟುವ ಮೂಲಕ ರಾಷ್ಟ್ರಕ್ಕಾಗಿ ಸೇವೆಸಲ್ಲಿಸುತ್ತಿರುವವರನ್ನು ಗೌರವಿಸಿ ಎಂದು ಕರೆಕೊಟ್ಟರು. ಅಲ್ಲದೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರನ್ನು ಗೌರವಿಸಿ ಎಂದರು.
ಕೊರೋನಾಗೆ ಮದ್ದಿಲ್ಲ. ಲಸಿಕೆ ಕಂಡು ಹಿಡಿಯಲು ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಸದ್ಯ ಸಂಕಲ್ಪ, ಸಂಯಮಗಳೇ ಅಸ್ತ್ರವಾಗಿರಲಿ ಎಂದರು. ನಾವು ಆರೋಗ್ಯವಾಗಿದ್ದರೆ ವಿಶ್ವವೇ ಆರೋಗ್ಯವಾಗಿರುತ್ತದೆ ಎಂದ ಅವರು, ಜನರೇ ಜನರಿಗಾಗಿ ಘೋಷಿಸಿಕೊಳ್ಳೋ `ಜನತಾ ಕರ್ಫ್ಯೂ’ಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜನತಾ ಕರ್ಫ್ಯೂಗೆ ಪ್ರಧಾನಿ ಮೋದಿ ಕರೆ
LEAVE A REPLY
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
zithromax online overnight
zithromax sinus infection