ಭಾರತಕ್ಕೆ ಅಮೆರಿಕಾ, ಬ್ರಿಟನ್, ಫ್ರಾನ್ಸ್ ಬೆಂಬಲ..!

0
210

ನವದೆಹಲಿ: ಪಾಕಿಸ್ತಾನ ಭಾರತ ನಡುವೆ ಬಿಗುವಿನ ವಾತಾವಣ ಸೃಷ್ಟಿಯಾಗಿದ್ದು, ಜೈಷ್​-ಇ-ಮಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​​ನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಒತ್ತಡ ಹೆಚ್ಚಾಗಿದೆ. ಪಾಕ್​ ಎದುರಾಗಿ ಭಾರತಕ್ಕೆ ಅಮೆರಿಕಾ, ಬ್ರಿಟನ್, ಫ್ರಾನ್ಸ್ ಬೆಂಬಲ ಸೂಚಿಸಿದ್ದು ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ.

ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂರು ಸದಸ್ಯ ವಿಟೋ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ರಷ್ಯವೂ ಈ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದೆ. ಮಸೂದ್​ನನ್ನು ಬಂಧಿಸುವಂತೆ ಯುಎನ್​ ಭದ್ರತಾ ಮಂಡಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ. ಜೈಷ್​ ಉಗ್ರನ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ವ್ಯಕ್ತವಾಗಿದೆ. ಜೈಷ್ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಲಾಗಿದೆ. ಚೀನಾ ಎಂದಿನಂತೆಯೇ ಪಾಪಿ ಪಾಕ್​ ಬೆಂಬಲಕ್ಕೆ ನಿಂತಿದ್ದು ಉಗ್ರ ಉಗ್ರ ಮಸೂದ್​​ನನ್ನು ‘ಅಂತಾರಾಷ್ಟ್ರೀಯ ಉಗ್ರ’ ಎಂದು ಘೋಷಿಸಲು ವಿರೋಧ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here