Home ರಾಜ್ಯ 'ಕಾರವಾರ ಸಮುದ್ರದಲ್ಲಿ ಡಾಲ್ಫಿನ್ ಸೆಂಟರ್ ಗೆ ಸಿದ್ಧತೆ'

‘ಕಾರವಾರ ಸಮುದ್ರದಲ್ಲಿ ಡಾಲ್ಫಿನ್ ಸೆಂಟರ್ ಗೆ ಸಿದ್ಧತೆ’

ಕಾರವಾರ: ಕರ್ನಾಟಕದ ಕಾಶ್ಮೀರ ಕಾರವಾರ ಅಂದ್ರೆ ಸಾಕು ಅದು ಪ್ರವಾಸಿಗರ ಹಾಟ್ ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಇಲ್ಲಿನ ಬೀಚ್ ನಡುಗಡ್ಡೆ ಎಲ್ಲವೂ ಕೂಡ ಪ್ರವಾಸಿಗರಿಗೆ ಅತ್ಯಂತ ಅಚ್ಚುಮೆಚ್ಚು. ಇಂತಾ ಪ್ರವಾಸಿ ಸ್ಥಳದಲ್ಲೀಗ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲು ಯೋಜನೆಯೊಂದು ಸದ್ದಿಲ್ಲದೇ ಪ್ರಾರಂಭವಾಗುತ್ತಿದೆ.

ಎಸ್ ಡೈನೋಸಾರಸ್ ಗಳಂತೆ ಡಾಲ್ಫಿನ್ ಗಳನ್ನ ಕೂಡ ಅಳಿವಿನಂಚಿನಲ್ಲಿರುವ ಜೀವಿ ಅಂತಾ ಗುರುತಿಸಿಲಾಗುತ್ತಿದೆ. ಐಯುಸಿಎನ್ (ಇಂಟರ್ ನ್ಯಾಷನಲ್  ಯೂನಿಯನ್ ಫಾರ್ ಕಂಜರ್ವೇಷನ್ ಆಫ್ ನೇಚರ್) ವರದಿ ಪ್ರಕಾರ ಡಾಲ್ಫಿನ್ ಗಳು ಅಳಿವಿನಂಚಿನಲ್ಲಿವೆಯಂತೆ.  ಹಾಗಾಗಿ ಡೈನೋಸಾರಸ್ ಗಳನ್ನ ಈಗಿನ ಪೀಳಿಗೆಗೆ ಚಿತ್ರದಲ್ಲಿ ತೋರಿಸುವಂತೆ ಡಾಲ್ಫಿನ್ ಗಳನ್ನ ಸಹ ಚಿತ್ರದಲ್ಲಿ ತೋರಿಸಬೇಕಾದ ದಿನ ದೂರವಿಲ್ಲ. ಆದರೆ ಕರ್ನಾಟಕದ ಕಾರವಾರದ ಕಡಲತೀರದಲ್ಲಿ ಮಾತ್ರ ಈಗಲೂ ಬಾರೀ ಸಂಖ್ಯೆಯ ಡಾಲ್ಫಿನ್ ಗಳು ಆಳ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಕಾಣಿಸುತ್ತಿವೆ.

ಇಲ್ಲಿನ ದೇವಭಾಗ ಮತ್ತು ಲೈಟ್ ಹೌಸ್ ಕಡಲಲ್ಲಿ ಬಾರೀ ಸಂಖ್ಯೆಯ ಡಾಲ್ಫಿನ್ ಗಳ ಈಜಾಟ ನಡೆಸುತ್ತಿದ್ದುದನ್ನ ಗಮನಿಸಿದ ಕಾರವಾರ ಕಡಲ ಜೀವ ವಿಜ್ಞಾನ ಸಂಸ್ಥೆ ಮತ್ತು ಅರಣ್ಯ ಇಲಾಖೆ ಡಾಲ್ಫಿನ್ ಗಳನ್ನ ಉಳಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನ ಸಿದ್ದಪಡಿಸಿದೆ. ಅಲ್ಲದೇ ಆ ಪ್ರಸ್ತಾಪವನ್ನ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಇಲ್ಲಿನ ಕೂರ್ಮಗಢ ಐಲ್ಯಾಂಡ್ ಮತ್ತು ಲೈಟ್ ಹೌಸ್ ಭಾಗದಲ್ಲಿ ಡಾಲ್ಫಿನ್ ಗಳನ್ನ ಒಂದು ಕಡೆ ಸೇರುವಂತೆ  ವ್ಯವಸ್ಥೆ ಕಲ್ಪಿಸಿ ಡಾಲ್ಪಿನ್ ಸಂತತಿ ಉಳಿಸಲು ಸೂಕ್ಷ್ಮ ವಲಯ ಗುರುತಿಸಿ ಅಲ್ಲೇ ರೆಸ್ಕ್ಯೂ ಸೆಂಟರ್ ರೀತಿಯ ವಾತಾವರಣ ಮಾಡಲು ನಿರ್ಧರಿಸಿದ್ದಾರೆ.  ಈ ವ್ಯವಸ್ಥೆ ಮಾಡುವ ಯೋಜನೆಗೆ ಪ್ರಸ್ತಾಪವನ್ನ ಕೇಂದ್ರದ ಮುಂದಿಟ್ಟು ಅನುಮತಿಗಾಗಿ ಕಾಯುತ್ತಿದ್ದಾರೆ.

ಕೂರ್ಮಗಡ ಐಲ್ಯಾಂಡ್ ಸಮೀಪದ ಕಡಲಲ್ಲಿ ಕೆಲ ಭಾಗಗಳಲ್ಲಿ ಬೋಟ್ ಹೋಗುವುಕ್ಕೆ ನಿರ್ಬಂಧ ಹೇರಿ ಅಲ್ಲಿ ಸೂಕ್ಷ್ಮ ವಲಯದ ವಾತಾವರಣ ಕಲ್ಪಿಸಿ ಪ್ರವಾಸಿಗರಿಗೆ ಡಾಲ್ಫಿನ್ ವಾಚ್ ಮಾಡಿಸುವ ಯೋಜನೆ ಇದಾಗಿದೆ. ಯೋಜನೆಗೆ ಸುಮಾರು 10 ಕೋಟಿ ರೂ ವೆಚ್ಚವಾಗಲಿದ್ದು, ಅದಕ್ಕೆ ಕೇಂದ್ರದ ಅನುಮತಿ ಕೊಟ್ಟಿದ್ದೇ ಆದಲ್ಲಿ ಬಾರೀ ಸಂಖ್ಯೆಯ ಪ್ರವಾಸೋಧ್ಯಮ ಮಾತ್ರವಲ್ಲದೇ ಡಾಲ್ಫಿನ್ ಗಳನ್ನ ಸಹ ಉಳಿಸಲು ಸಾಧ್ಯವಿದೆ. ಇನ್ನು ಈಗ ಕೂರ್ಮಗಡ ಐಲ್ಯಾಂಡ್ ಅಕ್ಕಪಕ್ಕ ಸಾಕಷ್ಟು ಡಾಲ್ಫಿನ್ ಸಂತತಿ ಇದ್ರೂ ಕೂಡ ಬೋಟ್ ಮತ್ತು ಶಿಪ್ ಗಳ ಸಂಚಾರದಿಂದ ಅವು ಪದೇ ಪದೇ ವಲಸೆ ಹೋಗುವುದರಿಂದಾಗಿ ಪ್ರವಾಸಿಗರಿಗೆ ನೋಡುವುದಕ್ಕೆ ಕಾಣಸಿಗುತ್ತಿಲ್ಲ. ಎಷ್ಟೋ ಬಾರಿ ಪ್ರವಾಸಿಗರು ಅಳಿವಿನಂಚಿನ ಈ ಜೀವಿಯನ್ನ ನೋಡೋಣ ಅಂತಾ ಬಂದ್ರೂ ಅನಿವಾರ್ಯವಾಗಿ ಡಾಲ್ಫಿನ್ ಕಾಣದೇ ಬೇಸರಿಸಿಕೊಂಡು ವಾಪಾಸ್ ಹೋಗುತ್ತಾರೆ.

ಒಟ್ಟಾರೆ ನಿಗದಿತ ಸೂಕ್ಷ್ಮ ಪ್ರದೇಶ ಗುರುತಿಸಿ ಬೋಟ್ ಕಾರ್ಯನಿರ್ವಹಣೆ ಕಡಿಮೆ ಮಾಡಿದಲ್ಲಿ ಅಳಿವಿನಂಚಿನ ಜೀವಿ ಉಳಿಸೋದರ ಜೊತೆಗೆ ಮತ್ತಷ್ಟು ಪ್ರವಾಸಿಗರನ್ನ ಇತ್ತ ಸೆಳೆಯೋದರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments