ಬೆಂಗಳೂರು: ಲವ್ ಮಾಕ್ಟೇಲ್ ಸಿನಿಮಾದಿಂದ 2020ರ ಸ್ಯಾಂಡಲ್ವುಡ್ಗೆ ವೆಲ್ಕಮ್ ಕೊಟ್ಟ ಮೋಸ್ಟ್ ಬ್ಯೂಟಿಫುಲ್ ಕಪಲ್ ಮಿಲನಾ – ಕೃಷ್ಣ, ನಿಜ ಜೀವನದಲ್ಲಿ ಒಂದಾಗ್ತಿದ್ದಾರೆ. 2021 ಫೆಬ್ರವರಿ 14 ವಿಶ್ವ ಪ್ರೇಮಿಗಳ ದಿನ ಕಲ್ಯಾಣಕ್ಕೆ ಅಣಿಯಾಗಿರೋ ಈ ಜೋಡಿ, ಅದಕ್ಕೂ ಮುನ್ನ ಬ್ಯಾಚುಲರೇಟ್ ಪಾರ್ಟಿ ಮಾಡೋ ಮೂಲಕ ಗಮನ ಸೆಳೆದಿದೆ.
ಕೆಲವೊಂದು ಜೋಡಿ ಒಂದಾದ್ರೆ ಅಟೋಮಿಟಿಕ್ ಆಗಿ ಲಕ್ಕು- ಲಕ್ಷ್ಮೀ, ಕೀರ್ತಿ- ಸ್ಫೂರ್ತಿ ಎಲ್ಲವೂ ಹುಡುಕಿಕೊಂಡು ಬರುತ್ವೆ. ಹಿರಿಯರು ಹೇಳ್ತಾರೆ ಸ್ವರ್ಗದಲ್ಲೇ ಅವಳಿಗೆ ಇವ್ನು, ಇವಳಿಗೆ ಅವ್ನು ಅಂತ ನಿಶ್ಚಯ ಆಗಿರುತ್ತಂತೆ. ಸದ್ಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೀವನವೂ ಹಾಗೇ ಆಗ್ತಿದೆ. ರೀಲ್ನಿಂದ ರಿಯಲ್ ಲೈಫ್ಗೆ ಶಿಫ್ಟ್ ಆಗ್ತಿದ್ದಾರೆ ಮಿಲನಾ- ಕೃಷ್ಣ ವಂಡರ್ ಪುಲ್ ಲವ್ ಬರ್ಡ್ಸ್.
ಹೌದು ಈ ವರ್ಷದ ಆರಂಭದಲ್ಲಿ, ಅಂದ್ರೆ ಜನವರಿ ನಾಲ್ಕನೇ ವಾರ ‘ಲವ್ ಮಾಕ್ಟೇಲ್’ ಮೂಲಕ ಪ್ರೇಕ್ಷಕರ ಮುಂದೆ ಬಂತು ಈ ಜೋಡಿ. ಕೃಷ್ಣನ ಸಹಜ ಸುಂದರ ಪ್ರೀತಿಯ ಕಥೆಗೆ ಪ್ರೇಕ್ಷಕನಿಂದ ಮೆಚ್ಚುಗೆ ಸಿಕ್ಕಿತ್ತು. ಸಿನಿಮಾ ಯಶಸ್ಸಾಗುತ್ತಿದ್ದಂತೆ ಕೃಷ್ಣ ಮತ್ತು ಮಿಲನಾ ಇಬ್ಬರ ಆರು ವರ್ಷದ ಪ್ರೇಮ್ ಕಹಾನಿಯೂ ಬಹಿರಂಗವಾಯ್ತು. ನಂತ್ರ ಆದಿ- ನಿಧಿಮಾ ಮದ್ವೆ ಕನ್ಫರ್ಮ್ ಆಗಿ, ವಿಶ್ವ ಪ್ರೇಮಿಗಳ ದಿನಕ್ಕೆ ಮುಹೂರ್ತ ಕೂಡ ಫಿಕ್ಸ್ ಆಯ್ತು.
ಇದೀಗ ಇವ್ರ ಮದ್ವೆ ಡೇಟ್ ಸನಿಹ ಆಗ್ತಿದೆ. 2021ರ ಫೆಬ್ರವರಿ 14ನೇ ತಾರೀಖು ಹಸೆಮಣೆ ಏರೋಕ್ಕೆ ಸಜ್ಜಾಗಿರೋ ಈ ಅಪರೂಪದ ತಾರಾ ಜೋಡಿ, ಇತ್ತೀಚೆಗೆ ಬ್ಯಾಚುಲರೇಟ್ ಪಾರ್ಟಿ ಮಾಡಿಕೊಂಡಿದೆ. ಹೌದು ನಗರದ ಖಾಸಗಿ ಹೋಟೆಲ್ನಲ್ಲಿ ಮಿಲನಾ ಹಾಗೂ ಕೃಷ್ಣ ತಮ್ಮ ಲವ್ ಮಾಕ್ಟೇಲ್ ಟೀಂ ಹಾಗೂ ಅತ್ಯಾಪ್ತರೊಂದಿಗೆ ಆಲ್ಕೋಹಾಲ್ ಇಲ್ಲದೇ ಪಾರ್ಟಿ ಮಾಡಿದ್ದಾರೆ. ಅದ್ರಲ್ಲಿ ಕಪಲ್ ಗೋಲ್ಸ್ ಜೊತೆ ಪರಸ್ಪರ ರಿಂಗ್ಸ್ ಎಕ್ಸ್ಚೇಂಜ್ ಕೂಡ ಮಾಡಿಕೊಂಡಿದೆ ಸ್ಟಾರ್ ಜೋಡಿ. ಇನ್ನೂ ಆತ್ಮೀಯರು ಇವ್ರಿಗೆ ಶುಭ ಹಾರೈಸಿದ್ದು, ಮದ್ವೆ ಪ್ರಿಪರೇಷನ್ಸ್ ಭರ್ಜರಿಯಾಗಿ ನಡೆಯುತ್ತಿವೆಯಂತೆ.