ಕನಸುಗಾರನ ಮ್ಯೂಸಿಕಲ್ `ಪ್ರೇಮಲೋಕ’ದಲ್ಲಿ 1,500 ಟ್ಯೂನ್​ಗಳು!

0
143

ಸ್ಯಾಂಡಲ್ವುಡ್​ ‘ಕನಸುಗಾರ’ ಕ್ರೇಜಿಸ್ಟಾರ್ ರವಿಂದ್ರನ್ನೇ ಹಾಗೆ…ಸದಾ ಹೊಸತನವನ್ನು ಎದುರು ನೋಡುವ, ಹೊಸ ಕಲ್ಪನೆಗಳೊಂದಿಗೆ ಸಿನಿಮಾ ಮಾಡುವ ಮೋಡಿಗಾರ.
ಸ್ಟಾರ್ ಡೈರೆಕ್ಟರ್, ಸ್ಟಾರ್ ಆ್ಯಕ್ಟರ್ ರವಿಚಂದ್ರನ್ ಅಂದ ಕೂಡಲೇ ಥಟ್ ಅಂತ ನೆನಪಾಗೋ ಸಿನಿಮಾಗಳಲ್ಲಿ ‘ಪ್ರೇಮಲೋಕ’ ಫಸ್ಟ್. 1987ರಲ್ಲಿ ತೆರೆಕಂಡಿದ್ದ ಪ್ರೇಮಲೋಕ ಎಂಬ ಸಿನಿ ಪ್ರೇಮಕಾವ್ಯ ಸ್ಯಾಂಡಲ್ವುಡ್​ಗೆ ಹೊಸತನವನ್ನು ಪರಿಚಯಿಸಿತ್ತು. ಹಾಡುಗಳಿಂದಲೇ ಅದ್ಧೂರಿ ಸಿನಿಮಾ ಮಾಡಬಹುದು ಅಂತ ರವಿಚಂದ್ರನ್ ಅಂದೇ ತೋರಿಸಿಕೊಟ್ಟಿದ್ದರು. ರವಿಚಂದ್ರನ್​ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಪ್ರೇಮಲೋಕ ಚಂದನವನದ ಎವರ್​ಗ್ರೀನ್ ಮೂವಿ. ಈಗ ರವಿಚಂದ್ರನ್ ಮತ್ತೊಮ್ಮೆ ‘ಪ್ರೇಮಲೋಕ’ ಎಂಬ ಸಿನಿ -ಸಂಗೀತ ದೃಶ್ಯಕಾವ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.
ಹೌದು ರವಿಚಂದ್ರನ್ ಪ್ರೇಮಲೋಕ ಎಂಬ ಸಿನಿಮಾ ಮಾಡ್ತಿದ್ದಾರೆ. ಇದು ಬರೀ ಸಿನಿಮಾವಲ್ಲ. ಮ್ಯೂಸಿಕಲ್ ಕಹಾನಿ.. ಒಂದಲ್ಲ ಎರಡಲ್ಲ ಸಿನಿಮಾ ತುಂಬಾ ಬರೀ ಹಾಡುಗಳೇ! ಇದಕ್ಕಾಗಿ ರವಿಚಂದ್ರನ್ ಈಗಾಗಲೇ ಬರೋಬ್ಬರಿ 1,500 ಟ್ಯೂನ್​ಗಳನ್ನು ಕಂಪೋಸ್​ ಮಾಡಿದ್ದಾರಂತೆ.
ಅಂದಹಾಗೆ ಈ ಮ್ಯೂಸಿಕಲ್ ಪ್ರೇಮಲೋಕದ ಕನಸು ಸುಮಾರು 30 ವರ್ಷಗಳದ್ದಂತೆ. ಒಂದಿಷ್ಟು ಸೋಲುಗಳಿಂದ ಬೇಸತ್ತು ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿರದ ರವಿಚಂದ್ರನ್, ಈಗ ತನ್ನಕನಸಿನ ಕೂಸಿಗೆ ನೀರೆರೆಯುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ರವಿ ಬೋಪಣ್ಣ ಸಿನಿಮಾದಲ್ಲಿ ಬ್ಯುಸಿ ಇರೋ ‘ಪ್ರೇಮಲೋಕ’ದ ‘ರಣಧೀರ’ ಶೀಘ್ರದಲ್ಲೇ ಹೊಸ ಮ್ಯೂಸಿಕಲ್ ‘ಪ್ರೇಮಲೋಕ’ವನ್ನು ನಿರ್ಮಿಸಲಿದ್ದಾರೆ.
-ಮನೋಜ್ ನರಗುಂದಕರ್

LEAVE A REPLY

Please enter your comment!
Please enter your name here