ವೈರಲ್ ಆಡಿಯೋ ಬಗ್ಗೆ ಪ್ರೀತಂಗೌಡ ಸಮಜಾಯಿಷಿ ಏನು?

0
170

ಹಾಸನ : ಬಿಜೆಪಿ ಅಭ್ಯರ್ಥಿ ಎ. ಮಂಜು ಅವರನ್ನು ಸೋಲಿಸಲು ಸ್ವತಃ ಬಿಜೆಪಿ ಶಾಸಕ ಪ್ರೀತಂಗೌಡ ಪಿತೂರಿ ನಡೆಸಿದ್ದಾರೆ ಎನ್ನಲಾದ ಆಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ಪ್ರೀತಂಗೌಡ ಅವರೇ ಸಮಜಾಯಿಷಿ ನೀಡಿದ್ದಾರೆ.
ಆಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಪ್ರೀತಂಗೌಡ, ”ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಫೇಕ್ ಆಡಿಯೋವನ್ನು ಎಡಿಟ್​ ಮಾಡಿ ಬಿಟ್ಟಿದ್ದಾರೆ. ಫೇಕ್​ ಆಡಿಯೋ ಬಿಟ್ಟು ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ .ಆಗ ಎ.ಮಂಜು ಇನ್ನೂ ಬಿಜೆಪಿಗೆ ಬಂದಿರಲಿಲ್ಲ. ಬಿಜೆಪಿ ಸೇರುವ ಬಗ್ಗೆ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್​ ಮಾಡಲಾಗಿದೆ. ಎ. ಮಂಜು ಅವರು ನನ್ನ ಆತ್ಮೀಯ ಸ್ನೇಹಿತರು” ಅಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಎ.ಮಂಜು, ”ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು. ಇದು ಜೆಡಿಎಸ್​​​ನವರ ಪಿತೂರಿ” ಎಂದಿದ್ದಾರೆ.

LEAVE A REPLY

Please enter your comment!
Please enter your name here