ಬೆಂಗಳೂರು : ಮಹಾ ಮಾರಿ ಕೊರೋನಾ ಯಾರನ್ನು ಬಿಡುತ್ತಿಲ್ಲ ಇದೀಗ ಸ್ಯಾಂಡಲ್ ವುಡ್ ನಟ ಲವ್ಲಿಸ್ಟಾರ್ ಪ್ರೇಮ್ ಕುಟುಂಬಕ್ಕೆ ಕೊರೋನಾ ಎಂಟ್ರಿ ಕೊಟ್ಟಿದೆ. ನಟ ಪ್ರೇಮ್ ತಾಯಿಗೆ ಕೊರೋನಾ ಸೋಂಕು ದೃಢವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘’ತಾಯಿಗೆ ಜ್ವರ ಬಂದ ಹಿನ್ನೆಲೆ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿತ್ತು ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು ಸದ್ಯ ಅಮ್ಮನ ಆರೋಗ್ಯ ಸ್ಥಿರವಾಗಿದೆ, ಉಸಿರಾಟದ ತೊಂದರೆ ಏನಿಲ್ಲ’’ ಎಂದು ಪವರ್ ಟಿವಿಗೆ ದೂರವಾಣಿ ಮೂಲಕ ಪ್ರೇಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚೆಗೆ ಪ್ರೇಮ್ ಕೊರೋನಾ ಬಾರದಿರಲೆಂದು ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿ ಮಂತ್ರಾಲಯದಲ್ಲೂ ಉರುಳುಸೇವೆ ಮಾಡಿದ್ದರು.