ಬೆಂಗಳೂರು: ರಾಜ್ಯದ ನೂತನ ಡಿಜಿ ಐಜಿಪಿಯಾಗಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ನೀಲಮಣಿ ಎನ್ ರಾಜು ಅವರು ರಾಜ್ಯದ ಡಿಜಿ ಐಜಿಪಿಯವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಇಂದು ನಿವೃತ್ತಿ ಹೊಂದಿದ್ದು, ಅವರ ಸ್ಥಾನಕ್ಕೆ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ. ಈ ಸ್ಥಾನಕ್ಕಾಗಿ ಪ್ರವೀಣ್ ಸೂದ್ ಹಾಗೂ ಎ ಎಂ ಪ್ರಸಾದ್ ಅವರ ಮಧ್ಯೆ ಪೈಪೋಟಿಯೂ ನಡೆದಿತ್ತು. ಹಾಗಾಗಿ ರಾಜ್ಯದ ಮುಂದಿನ ಡಿಜಿ ಐಜಿಪಿ ಯಾರಾಗ್ತಾರೆ ಅನ್ನುವ ಗೊಂದಲ ಉಂಟಾಗಿತ್ತು. ಈಗ ಆ ಗೊಂದಲಕ್ಕೆ ತೆರೆ ಬಿದ್ದಿದೆ.
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪ್ರವೀಣ್ ಸೂದ್ ಬಿ.ಟೆಕ್ ಪದವೀಧರರು. ಅವರು ಬೆಂಗಳೂರು ಕಮಿಷನರ್ ಆಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಪ್ರವೀಣ್ ಸಿಐಡಿ ವಿಭಾಗದ ಡಿಜಿಪಿ ಆಗಿದ್ದರು. 1986 ರ ವಿಭಾಗದ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು 2022 ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.
order zithromax 250 mg
does zithromax treat strep throat