ಬಂಡೀಪುರದಲ್ಲಿ ಬೇಕಂತಲೇ ಬೆಂಕಿ ಹಚ್ಚಲಾಗಿದೆ : ಪ್ರತಾಪ್​ ಸಿಂಹ

0
281

ಮೈಸೂರು : ಬಂಡೀಪುರ ಅರಣ್ಯಕ್ಕೆ ಬೇಕಂತಲೇ ಬೆಂಕಿ ಹಚ್ಚಲಾಗಿದೆ ಅಂತ ಸಂಸದ ಪ್ರತಾಪ್​ ಸಿಂಹ ಆರೋಪ ಮಾಡಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಬಂಡೀಪುರದಲ್ಲಿ ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಲಾಗಿದೆ. ತನಿಖೆಯಿಂದ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ. ಹುಲಿ ಸಂರಕ್ಷಣೆಗೆ ಸಾಕಷ್ಟು ಯೋಜನೆ ಜಾರಿಗೆ ಬಂದಿವೆ. ಈ ಅರಣ್ಯ ಪ್ರದೇಶದಲ್ಲಿ ಅತೀ ಹೆಚ್ಚು ಹುಲಿಗಳು ಇದ್ದವು. ಇಲ್ಲೇ ಹುಲಿಗಳ ಸಂರಕ್ಷಣೆ ಮಾಡಿಲ್ಲ ಅಂದ್ರೆ ಹೇಗೆ? ಕಾರಿಗಾದ್ರೆ ಇನ್ಶೂರೆನ್ಸ್ ಇರುತ್ತೆ. ಪ್ರಾಣಿಗಳ ಕಥೆಯೇನು ಅಂತ ಪ್ರಶ್ನಿಸಿದ್ರು. ಈ ರೀತಿಯ ಅವಘಡಗಳು ಸಂಭವಿಸದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

LEAVE A REPLY

Please enter your comment!
Please enter your name here