`ಮದಗಜ’ ಕೈ ಹಿಡಿದ ಕೆಜಿಎಫ್​ ಡೈರೆಕ್ಟರ್ ನೀಲ್..!

0
444

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ‘ಮದಗಜ’ ಸಿನಿಮಾಗೆ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೈ ಜೋಡಿಸಿದ್ದಾರೆ. ಅರೆ, ಮದಗಜಗೆ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳೋದಲ್ವಾ? ಡೈರೆಕ್ಟರ್ ಚೇಂಜ್ ಆಗ್ಬಿಟ್ರಾ? ಮಹೇಶ್ ಕುಮಾರ್ ಬದಲಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಾರ ಅಂತ ಕೇಳ್ತಿದ್ದೀರಾ? ಇಲ್ಲ… ಮಹೇಶ್ ಕುಮಾರೇ ನಿರ್ದೇಶನ ಮಾಡೋದು. ಆದ್ರೆ, ಪ್ರಶಾಂತ್ ನೀಲ್ ಸ್ಕ್ರಿಪ್ಟ್​ ವರ್ಕ್​​ನಲ್ಲಿ ತಮ್ಮ ಚಳಕ ತೋರಿಸ್ತಿದ್ದಾರೆ.
ಈ ಬಗ್ಗೆ ಸ್ವತಃ ಪ್ರೊಡ್ಯೂಸರ್ ಉಮಾಪತಿ ಹೇಳಿದ್ದಾರೆ. ಕೆಜಿಎಫ್​ -2ನ ಬಿಡುವಿಲ್ಲದ ಕೆಲಸಗಳ ನಡುವೆಯೂ ಪ್ರಶಾಂತ್ ನೀಲ್ ಮದಗಜ ಸ್ಜ್ರಿಪ್ಟ್ ನೋಡಿ, ಒಂದಿಷ್ಟು ತಿದ್ದುಪಡಿ ಮಾಡ್ತಿದ್ದಾರಂತೆ. ಡಿಸೆಂಬರ್ ಅಥವಾ 2020ರ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ.
ಶ್ರೀ ಮುರಳಿಗೆ ಬ್ರೇಕ್ ಕೊಟ್ಟ ಉಗ್ರಂ ಸಿನಿಮಾ ಡೈರೆಕ್ಟರ್ ಪ್ರಶಾಂತ್ ನೀಲ್. ಅದು ನೀಲ್​ಗೆ ಚೊಚ್ಚಲ ಸಿನಿಮಾವಾಗಿತ್ತು. ನೀಲ್ ಎರಡನೇ ಸಿನಿಮಾ ಕೆಜಿಎಫ್. ಸದ್ಯ ಕೆಜಿಎಫ್ 2 ಚಿತ್ರ ಸೆಟ್ಟೇರಿದೆ.

LEAVE A REPLY

Please enter your comment!
Please enter your name here