Home ಸಿನಿ ಪವರ್ ಆಗಸ್ಟ್​ನಲ್ಲಿ ದರ್ಶನ್ ಮಾತ್ರವಲ್ಲ ಶ್ರೀಮುರಳಿ, ಪ್ರಜ್ವಲ್​ ಕೂಡ ಗಿಫ್ಟ್ ಕೊಡ್ತಿದ್ದಾರೆ..!

ಆಗಸ್ಟ್​ನಲ್ಲಿ ದರ್ಶನ್ ಮಾತ್ರವಲ್ಲ ಶ್ರೀಮುರಳಿ, ಪ್ರಜ್ವಲ್​ ಕೂಡ ಗಿಫ್ಟ್ ಕೊಡ್ತಿದ್ದಾರೆ..!

ಈ ಆಗಸ್ಟ್ ಸ್ಯಾಂಡಲ್​ವುಡ್​ ಸಿನಿ ಪ್ರಿಯರ ಪಾಲಿಗೆ ಸುಗ್ಗಿಕಾಲ. ಸ್ಟಾರ್ ನಟರ ಅಭಿಮಾನಿಗಳಿಗಂತೂ ಹಬ್ಬದೂಟ..! ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ ಬಹು ದೊಡ್ಡ ತಾರಾಗಣದ, ಬಿಗ್ ಬಜೆಟ್ ಮೂವಿ ‘ಕುರುಕ್ಷೇತ್ರ’ ರಿಲೀಸ್​ ಆಗುವ ಸುದ್ದಿ ಈಗಾಗಲೇ ಗೊತ್ತಿರುವಂತದ್ದೇ..!
ಕುರುಕ್ಷೇತ್ರ ಮಾತ್ರವಲ್ಲದೆ ಕೋಮಲ್​ ಹೊಸ ಗೆಟಪ್​ನಲ್ಲಿ ಬರ್ತಿರೋ ಕೆಂಪೇಗೌಡ-2 ಹಾಗೆಯೇ ಬಹು ನಿರೀಕ್ಷಿತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಸೇರಿದಂತೆ ಒಂದಿಷ್ಟು ಸಿನಿಮಾಗಳು ಸಾಲು ಸಾಲಾಗಿ ಆಗಸ್ಟ್​ನಲ್ಲಿ ರಿಲೀಸ್ ಆಗುತ್ತಿವೆ. ಸ್ಯಾಂಡಲ್​ವುಡ್​ನ ಈ ಸಂಭ್ರಮವನ್ನು ಹೆಚ್ಚಿಸಲು ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಡೈನಾಮಿಕ್ ಪ್ರಿನ್ಸ್​ ಪ್ರಜ್ವಲ್ ದೇವರಾಜ್​ ಕೂಡ ಸರ್​​ಪ್ರೈಸ್​ ನೀಡುತ್ತಿದ್ದಾರೆ.

ಡೈನಾಮಿಕ್ ಪ್ರಿನ್ಸ್​ ಪ್ರಜ್ವಲ್​ ದೇವರಾಜ್ ಆಗಸ್ಟ್ ಮೊದಲ ವಾರದಲ್ಲಿ , ರೋರಿಂಗ್ ಸ್ಟಾರ್ ಶ್ರೀಮುರಳಿ ಆಗಸ್ಟ್​ 2ನೇ ವಾರದಲ್ಲಿ ಅಭಿಮಾನಿಗಳಿಗೆ ಗಿಫ್ಟ್ ಕೊಡಲಿದ್ದಾರೆ. ಪ್ರಜ್ವಲ್ ಅಭಿನಯದ ಅರ್ಜುನ್ ಗೌಡ ಸಿನಿಮಾದ ಟ್ರೈಲರ್ ಆಗಸ್ಟ್​ 2ಕ್ಕೆ ರಿಲೀಸ್ ಆಗುತ್ತಿದೆ. ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಕ್ಕೆ ರಾಮು ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಕುತೂಹಲ ಗರಿಗೆದರಿದ್ದು, ಟ್ರೈಲರ್​ಗೆ ಪ್ರಜ್ಜು ಫ್ಯಾನ್ಸ್ ವ್ಹೇಟ್ ಮಾಡ್ತಿದ್ದಾರೆ.
ಇನ್ನು ಪ್ರಜ್ವಲ್ ಬೆನ್ನಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಗಿಫ್ಟ್​ ನೀಡ್ತಿದ್ದಾರೆ..! ಟೈಟಲ್​, ಪೋಸ್ಟರ್​, ಟೀಸರ್​ನಿಂದ ಗಮನ ಸೆಳೆದಿರುವ ಭರಾಟೆ ಟೀಮ್​ನಿಂದ ಮತ್ತೊಂದು ಸ್ವೀಟ್ ನ್ಯೂಸ್ ಬಂದಿದೆ. ಆಗಸ್ಟ್ 9ಕ್ಕೆ ಭರಾಟೆಯ ಮೊದಲ ಹಾಡು ರಿಲೀಸ್ ಆಗುತ್ತಿದೆ. ವರಮಾಲಕ್ಷ್ಮಿ ಹಬ್ಬದ ಪ್ರಯಕ್ತ ಮುರಳಿ ಫ್ಯಾನ್ಸ್​ಗೆ ಭರಾಟೆ ಹಾಡು ಸಿಗಲಿದೆ.
ಬಹುದ್ಧೂರ್ ಚೇತನ್ ಆ್ಯಕ್ಷನ್ ಕಟ್ ಹೇಳಿರೋ ಭರಾಟೆಯಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.
ಆಗಸ್ಟ್ 9ಕ್ಕೆ ದರ್ಶನ್ ಅಭಿನಯದ ದರ್ಶನ್ ನಟನೆಯ ಕುರುಕ್ಷೇತ್ರ ರಿಲೀಸ್ ಆಗುತ್ತಿದ್ದು, ಅದೇ ದಿನ ಕೋಮಲ್ ಅಭಿನಯದ ಕೆಂಪೇಗೌಡ -2 ಕೂಡ ತೆರೆಗೆ ಬರ್ತಾ ಇದೆ. ಇವುಗಳ ಜೊತೆಗೆ ರೋರಿಂಗ್ ಸ್ಟಾರ್ ಶ್ರೀಮುರಳಿಯವರ ಭರಾಟೆ ಹಾಡು ಯೂಟ್ಯೂಬ್​ಗೆ ಎಂಟ್ರಿಕೊಡ್ತಿದ್ದು.. ಒಟ್ನಲ್ಲಿ ಚಂದನವನದ ಅಭಿಮಾನಿಗಳಿಗೆ ಆಗಸ್ಟ್​ನಲ್ಲಿ ರಸದೌತಣ ಸಿಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊನೆಯ ಪರೀಕ್ಷೆಯಲ್ಲಿ 515 ವಿದ್ಯಾರ್ಥಿಗಳು ಗೈರು..!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕೊನೆಯ ದಿನವಾದ ಇಂದು ಒಟ್ಟು 515 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯಲ್ಲಿ 13061 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿತರಾಗಿದ್ದು ಅದರಲ್ಲಿ 12546...

ಮೊಬೈಲ್ ಸುಲಿಗೆ ಜೊತೆಗೆ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

ಶಿವಮೊಗ್ಗ : ಮೊಬೈಲ್ ಸುಲಿಗೆ ಮತ್ತು 3 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ತಪ್ಪಿಸಿಕೊಂಡು, ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳಾದ 19 ವರ್ಷದ ಪ್ರಶಾಂತ್ ಮತ್ತು 18...

ಮಲೆನಾಡಿನಲ್ಲಿ ಮಳೆಯ ಆರ್ಭಟ..!

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.  ಬೆಳಗ್ಗೆಯಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲೆ ಸಾಧಾರಣ ಮಳೆ ಕೂಡ ಸುರಿಯುತ್ತಿತ್ತು. ಆದರೆ, ಸಂಜೆ ವೇಳೆಗೆ...

ಮುಂಜರಾಬಾದ್ ಕೋಟೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ: ಸಚಿವ ಸಿ.ಟಿ. ರವಿ

ಹಾಸನ : ಸಕಲೇಶಪುರ ತಾಲ್ಲೂಕಿನಲ್ಲಿರುವ ಮುಂಜರಾಬಾದ್ ಕೋಟೆಯ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ಕೇಂದ್ರ ಪುರಾತತ್ವದ ಅನುಮತಿ ಪಡೆದು 3 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ...