Home ರಾಜ್ಯ ಪವರ್​ ಟಿವಿ `ಪವರ್​’ ಫುಲ್​ ಇಂಪ್ಯಾಕ್ಟ್​ :  ಕೊನೆಗೂ ಮಹಿಳೆಯ ಮೃತದೇಹ ಸಂಬಂಧಿಕರಿಗೆ ಹಸ್ತಾಂತರ

ಪವರ್​ ಟಿವಿ `ಪವರ್​’ ಫುಲ್​ ಇಂಪ್ಯಾಕ್ಟ್​ :  ಕೊನೆಗೂ ಮಹಿಳೆಯ ಮೃತದೇಹ ಸಂಬಂಧಿಕರಿಗೆ ಹಸ್ತಾಂತರ

ಬೆಂಗಳೂರು : ಇದು ಪವರ್ ಟಿವಿಯ ‘ಪವರ್’ ಫುಲ್ ಇಂಪ್ಯಾಕ್ಟ್​​. 9 ಲಕ್ಷ ಕೊಡಿ ಮೃತದೇಹ ತಗೊಂಡ್ಹೋಗಿ ಅಂತ ಅಮಾನವೀಯ ವರ್ತನೆ ತೋರಿದ್ದ ನಗರದ ವೈಟ್​​​ಫೀಲ್ಡ್​ನಲ್ಲಿನ ಮಣಿಪಾಲ ಆಸ್ಪತ್ರೆ ಪವರ್ ಟಿವಿ ವರದಿಗೆ ಎಚ್ಚೆತ್ತು ಮಹಿಳೆಯ ಮೃತದೇಹವನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಿದೆ.

ಪವರ್ ಟಿವಿ ವರದಿ ಮಾಡುತ್ತಿದ್ದಂತೆ ಸಚಿವ ಭೈರತಿ ಬಸವರಾಜ್​ ಆಸ್ಪತ್ರೆ ಭೇಟಿ ನೀಡಿದರು. ಬಳಿಕ ಸಿಬ್ಬಂದಿ ಸಂಬಂಧಿಕರಿಗೆ ಮಹಿಳೆಯ ಮೃತದೇಹವನ್ನು ಹಸ್ತಾಂತರ ಮಾಡಿದರು.

ಏನಿದು ಘಟನೆ : ಅಫ್ರೋಜ ಅನ್ನೋ ಮಹಿಳೆ, ಆಕೆಯ ಗಂಡ ಹಾಗೂ ಮಗ ಒಟ್ಟೊಟ್ಟಿಗೇ ಮೃತಪಟ್ಟ ದುರಂತ ಬೆಂಗಳೂರಲ್ಲಿ ನಡೆದಿದೆ. ಜುಲೈ 13 ರಂದು 46 ವರ್ಷದ  ಅಫ್ರೋಜ ಅವರನ್ನು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡ್ಬೇಕು ಅಂತ ಆಸ್ಪತ್ರೆ ವೈದ್ಯರು ಹೇಳಿದ್ರು. ಆ ಸುದ್ದಿ ಕೇಳಿ ಆಕೆಯ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ಪತಿ ಕಾರಿನಲ್ಲೇ  ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬಳಿಕ ತಂದೆಯ ಅಂತ್ಯಕ್ರಿಯೆ ಮುಗಿಸಿ ಬಂದ ಮಗ ಕೂಡ ಎರಡೇ ಎರಡು ದಿನದ ಬಳಿಕ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಗಂಡ ಮತ್ತು ಮಗನ ಸಾವಿನ ಬೆನ್ನಲ್ಲೇ ಚಿಕಿತ್ಸೆ ಫಲಿಸದೆ ಅಫ್ರೋಜ ಕೂಡ ನಿನ್ನೆ ನಿಧನರಾಗಿದ್ದಾರೆ.  ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಆಸ್ಪತ್ರೆ ಸಿಬ್ಬಂದಿ 9 ಲಕ್ಷ  ಬಿಲ್​ ಕಟ್ಟಲು ಒತ್ತಾಯಿಸಿದ್ದರು. ಬಿಲ್ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ ಅಂತ ಅಮಾನವೀಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಪವರ್ ಟಿವಿ ವರದಿ ಮಾಡಿತ್ತು.  

ಇನ್ನು ಪವರ್ ಟಿವಿ ಜೊತೆ ಮಾತನಾಡಿದ ಸಚಿವ ಭೈರತಿ ಬಸವರಾಜ್, ಸದ್ಯ ಮಹಿಳೆಯ ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ, ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

  ಘಟನೆ ಬಗ್ಗೆ ಸಂಪೂರ್ಣ ಓದಲು ಈ ಲಿಂಕ್ ಕ್ಲಿಕ್ ಮಾಡಿ – “9 ಲಕ್ಷ ಕೊಡಿ ಹೆಣ ತಗೊಂಡ್ಹೋಗಿ”..!

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments