Home ಕ್ರೀಡೆ P.Cricket ರೋಚಕ ಹಣಾಹಣೆಯಲ್ಲಿ ಗೆದ್ದು ಬೀಗಿದ ಪವರ್ ಫೈಟರ್ಸ್

ರೋಚಕ ಹಣಾಹಣೆಯಲ್ಲಿ ಗೆದ್ದು ಬೀಗಿದ ಪವರ್ ಫೈಟರ್ಸ್

ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ನಡೆದ. ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ‌ ರೋಚಕ ಹಣಾಹಣೆಯಲ್ಲಿ ಟೀಮ್ ಖುಷಿ ಕ್ರಿಕೆಟರ್ಸ್ ತಂಡದ ವಿರುದ್ದ ಪವರ್ ಫೈಟರ್ಸ್ ತಂಡ ಗೆಲುವು ಪಡೆಯಿತು.

ನಗರದ ಹಳೇ ಕುಂದುವಾಡ ಶಿಬಾರ ಸ್ಟೇಡಿಯಂನಲ್ಲಿ ಮನಾ ಯುವ ಬ್ರಿಗೇಡ್, ಜರವೇ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ಕುಂದುವಾಡ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು, ಫೈನಲ್​ಗೆ ಪವರ್ ಫೈಟರ್ಸ್ ಹಾಗೂ ಟೀಮ್ ಖುಷಿ ಕ್ರಿಕೇಟರ್ಸ್ ಅರ್ಹತೆ ಪಡೆದಿದ್ದವು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪವರ್ ಫೈಟರ್ಸ್ 3 ಓವರ್ ಮುಕ್ತಾಯಕ್ಕೆ ಕೇವಲ 18 ರನ್ ಪೇರಿಸಿತು, ಆದರೂ ಸಹ ಪಂದ್ಯ ಬಿಟ್ಟು ಕೊಡದೇ ಬಿಗಿ ಬೌಲಿಂಗ್ ದಾಳಿ ನಡೆಸಿತು, ಕೊನೆಯ ಓವರ್​ನಲ್ಲಿ 13 ರನ್  ಅವಶ್ಯಕತೆ ಬಿದ್ದಾಗ ಪಂದ್ಯ ರೋಚಕತೆಗೆ ತಿರುಗಿತು, ಕೊನೆಯ ಎಸೆತದಲ್ಲಿ ಆರು ರನ್ ಬೇಕಿದ್ದಾಗ ಕೇವಲ ಒಂದು ರನ್ ಪಡೆದು ಐದು ರನ್ ಗಳಿಂದ ಟೀಮ್ ಖುಷಿ ಕ್ರಿಕೇಟರ್ಸ್ ಸೋಲನ್ನು ಒಪ್ಪಿಕೊಂಡಿತು.‌ ಇದರೊಂದಿಗೆ ಕೆಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಪವರ್ ಫೈಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು, ರನ್ನರ್ ಆಗಿ ಟೀಮ್ ಖುಷಿ‌ ಕ್ರಿಕೆಟರ್ಸ್,ತೃತೀಯ ಸ್ಥಾನ ಇಲೆವೆನ್ ಸೋಲ್ಡಜರ್ಸ್ ತಂಡ ಪಡೆಯಿತು.

ಇನ್ನೂ‌ ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪಂದ್ಯಾವಳಿ ಉದ್ಘಾಟಿಸಿದರು. ಈ ವೇಳೆ ಬ್ರಿಡ್ಜ್ ನಿರ್ಮಿಸಿ ಕೊಡುವಂತೆ ಮನಾ ಯುವ ಬ್ರಿಗೇಡ್ ನಿಂದ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲಾಯಿತು. ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಬ್ಯಾಟಿಂಗ್ ಮಾಡುವ ಅಫಿಶೀಯಲ್ ಪಂದ್ಯಾವಳಿ ಉದ್ಘಾಟಿಸಿದರು, ಶ್ರೀ ವಚನಾನಂದ ಉಪಮೇಯರ್ ಶಿಲ್ಪಾ ಜಯಪ್ರಕಾಶ್, ವರ್ತಕರಾದ ರಾಘವೇಂದ್ರ ಎನ್ ದಿವಾಕರ್, ಗೌಡ್ರು ಬಸವರಾಜಪ್ಪ, ಶಿವಪ್ಪ,ಕೆಎಸ್ ಸಣ್ಣಿಂಗಪ್ಪ, ದೇವರಾಜ್, ಎನ್ ಟಿ ನಾಗರಾಜ್, ಮಧುನಾಗರಾಜ್, ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments