ಕಾಲ್ ಸೂಪ್ ಕುಡಿದ್ರೆ ಎಕ್ಸ್ಟ್ರಾ ಎನರ್ಜಿ ಬರುತ್ತೆ.. ತಲೆ ಮಾಂಸ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಮುಗಿಬಿದ್ದು ಕೊಂಡುಕೊಳ್ತೀರಾ..? ಹಾಗಿದ್ರೆ ನೀವು ಈ ಸ್ಟೋರಿ ನೋಡಲೇಬೇಕು.. ಪವರ್ ಟಿವಿ ಬಯಲು ಮಾಡಿರೋ ಮೆಗಾ ಎಕ್ಸ್ಕ್ಲೂಸಿವ್ ರಿಪೋರ್ಟ್ ಇದು…
ಬೆಳಗ್ಗೆ ಆದ್ರೆ ಸಾಕು ಅದೆಷ್ಟೋ ಮಂದಿಗೆ ಕಾಲು ಸೂಪು ಬೇಕೇ ಬೇಕು.. ಇನ್ನು ಸಂಜೆ ಆದ್ರೆ ತಲೆ ಮಾಂಸಾನೇ ಬೇಕು.. ಹೀಗೆ ಹೋಟೆಲ್ಗಳಲ್ಲಿ ಬಾಯಿ ಚಪ್ಪರಿಸಿ ನೀವು ತಿನ್ನೋ ಕುರಿ, ಮೇಕೆಯ ಮಾಂಸ, ಬೋಟಿ ಎಲ್ಲವೂ ಎಷ್ಟು ಸೇಫ್ ಅಂತಾ ನೀವು ಯಾವತ್ತಾದ್ರೂ ಆಲೋಚನೆ ಮಾಡಿದ್ದೀರಾ..? ಬೆಂಗಳೂರಿಗೆ ಪ್ರತಿ ನಿತ್ಯ ರಾಜಧಾನಿ ಎಕ್ಸ್ಪ್ರೆಸ್ನಿಂದ ಬರೋ ಕೊಳೆತ ಮಾಂಸವೇ ನೀವು ಬಾಯಿ ಚಪ್ಪರಿಸಿ ತಿನ್ತಿರೋ ಮಟನ್ ಅಂದ್ರೆ ನೀವು ನಂಬ್ತೀರಾ..? ನೀವು ನಂಬಲೇ ಬೇಕು… ಪವರ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಮಾಂಸ ದಂಧೆಯ ಕರಾಳ ಮುಖ ಬಯಲಾಗಿದೆ.
ರಾಜಧಾನಿ ಎಕ್ಸ್ಪ್ರೆಸ್ ರೈಲು.. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮೆಜೆಸ್ಟಿಕ್ನಲ್ಲಿರುವ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಬಂದು ನಿಲ್ಲುತ್ತೆ. ದೆಹಲಿ ಟು ಬೆಂಗಳೂರು, ಬೆಂಗಳೂರು ಟು ದೆಹಲಿಗೆ ಸಂಚರಿಸೋ ಪ್ರಮುಖ ರೈಲು.. ಇದರಲ್ಲಿ ಪ್ರತಿನಿತ್ಯ 40ರಿಂದ 50 ಪ್ಯಾಕ್ ಆಗಿರೋ ಬಾಕ್ಸ್ಗಳು ಬೆಂಗಳೂರಿಗೆ ಬರುತ್ತವೆ… ಆದ್ರೆ ಆ ಬಾಕ್ಸ್ಗಳಲ್ಲಿ ಏನಿದೆ ಅನ್ನೋದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಅಷ್ಟೊಂದು ಕರೆಕ್ಟಾಗಿ ಮಾಡ್ತಿದ್ರು ಖತರ್ನಾಕ್ ಕೆಲಸವನ್ನ..!
ದೆಹಲಿಯಲ್ಲಿ ಹೊರಟ ರೈಲು ಬೆಂಗಳೂರಿಗೆ ಬರೋಷ್ಟಿತ್ತಿಗೆ ರೈಲ್ವೆ ಸ್ಟೇಷನ್ನಲ್ಲಿ 2 ಟಂಟಂ ಗಾಡಿಗಳ ಜೊತೆ ಎಂಟತ್ತು ಜನ ರೆಡಿ ಆಗಿರ್ತಿದ್ರು. ರೈಲಿನಲ್ಲಿ ಬಂದ ಸತ್ತ ಕುರಿ, ಮೇಕೆಯ ತಲೆ, ಕಾಲು, ಬೋಟಿ ಹೀಗೆ ಮಾಂಸದ ಬಾಕ್ಸ್ಗಳನ್ನ ತುಂಬಿಕೊಂಡು ಹೊರಡ್ತಿದ್ರು..
ಈ ಬಾಕ್ಸ್ ಗಳು ರೈಲ್ವೆ ನಿಲ್ದಾಣದಿಂದ ಎಕ್ಸಿಟ್ ಆಗಬೇಕಾದ್ರೆ ಪ್ರತಿಯೊಂದು ಬಾಕ್ಸ್ ಗಳನ್ನೂ ಕೂಡಾ ಆರ್.ಪಿ.ಎಪ್. ಮತ್ತೆ ಜಿ.ಆರ್.ಪಿ ಯವರು ಚೆಕ್ ಮಾಡಿಯೇ ಕಳಿಸಬೇಕು. ಆದ್ರೆ ಇದ್ಯಾವ್ದು ಇಲ್ಲಿ ಆಗ್ತಿಲ್ಲ. ಯಾಕೆ ಗೊತ್ತಾ ಇದ್ರಿಂದ ರೈಲ್ವೇ ಇಲಾಖೆಗೆ ಬರ್ತಿರೋ ಎಂಜಲು ಕಾಸು.
ಸುಮಾರು 5 ದಿನಗಳ ಹಿಂದೆ ದೆಹಲಿಯಲ್ಲಿ ಪ್ರಾಣಿಗಳ ಒದೆ ಮಾಡಿ, ಅವುಗಳ ಛಿದ್ರ ಛಿದ್ರ ದೇಹದ ತುಂಡುಗಳನ್ನ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಇದು ಇವತ್ತಷ್ಟೇ ಅಲ್ಲ 22 ವರ್ಷಗಳಿಂದಲೂ ನಡೀತಿರೋ ಮಾಂಸ ದಂಧೆಯಂತೆ. ಸದ್ಯ ಈ ಬಗ್ಗೆ ನಮ್ಮಪವರ್ ಟಿವಿ ಕಳೆದ 10 ದಿನಗಳಿಂದ ಈ ದಂಧೆ ಬಗ್ಗೆ ಕೂಲಂಕುಷವಾಗಿ ಮಾಹಿತಿ ಕಲೆಹಾಕಿದೆ. ರೈಲಲ್ಲಿ ಬರೋ ಕೊಳೆತ ಮಾಂಸ ಎಲ್ಲಿ ಹೋಗುತ್ತೆ? ಯಾರ್ಯಾರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಅನ್ನೋ ಇಂಚಿಂಚು ಮಾಹಿತಿಯನ್ನ ಕಲೆಹಾಕಿ ಎಲ್ಲವನ್ನೂ ಬಟಾ ಬಯಲು ಮಾಡಿದೆ.
ಮಾಂಸ ಪ್ರಿಯರೇ ಹುಷಾರ್ – ಇದು ಪವರ್ ಟಿವಿ ರಹಸ್ಯ ಕಾರ್ಯಾಚರಣೆ-Power@12PM
Posted by Powertvnews on Tuesday, 21 July 2020
ಈ ಭಯಾನಕ ಸುದ್ದಿಯ ಅಸಲಿಯತ್ತನ್ನ ಪವರ್ ಟಿವಿ ಇಡೀ ರಾಜ್ಯದ ಜನತೆ ಮುಂದಿಟ್ಟಿದೆ. ಕುರಿ, ಮೇಕೆ ತಲೆ, ಬೋಟಿ, ಲಿವರ್, ಅರ್ದಂಬರ್ಧ ಬೇಯಿಸಿದ ಕಾಲುಗಳು ಕೊಳೆತ ಸ್ಥಿತಿಯಲ್ಲೇ ರಾಜಧಾನಿ ಫ್ಲಾಟ್ ಫಾರ್ಮ್ಗೆ ಬರ್ತಿರೋದನ್ನ ನೇರನೇರವಾಗಿ ಬಯಲಿಗೆಳೆದಿದೆ. ಹೀಗೆ ಕ್ವಿಂಟಾಲ್ಗಟ್ಟಲೆ ಬೆಂಗಳೂರಿಗೆ ಈ ಬಾಕ್ಸ್ಗಳು ಬರ್ತಿವೆ. ಆದ್ರೆ ಬಾಕ್ಸ್ಗಳಲ್ಲಿ ಏನಿದೆ ಅಂತ ಸ್ಪಷ್ಟವಾಗಿ ನಮೂದಿಸಬೇಕು. ಆದ್ರೆ ಇಲ್ಲಿ ಯಾವುದೇ ಕಾನೂನು ಪಾಲನೆ ಆಗೋದಿಲ್ಲ. ಈ ಬಾಕ್ಸ್ ಏನು ಅಂತ ಯಾರಾದ್ರು ಕೇಳಿದ್ರೆ ಚಿಕನ್ ಅಥವಾ ಫಿಶ್ ಇದೆ ಅಂತ ಎಂಟ್ರಿ ಮಾಡಿಸಿ ಹೊರಡುತ್ತಾರೆ. ರೈಲ್ವೆ ನಿಲವದಾಣಕ್ಕೆ ಬಂದ ಕೊಳೆತ ಮಾಂಸ ಶಿವಾಜಿನಗರ, ನೀಲಸಂದ್ರ ಕೆ.ಆರ್. ಮಾರ್ಕೆಟ್. ತುಮಕೂರು ಮಂಡ್ಯ ಸೇರಿದಂತೆ ಹಲವು ಕಡೆ ಸರಬರಾಜು ಮಾಡ್ತಿದ್ದಾರೆ. ಪವರ್ ಟಿವಿ ವರದಿ ನೋಡಿ ಮಾಂಸ ಪ್ರಿಯರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ಬಗ್ಗೆ ರೈಲ್ವೆ ಡಿಐಜಿ ರೂಪಾ ಅವರನ್ನು ಪವರ್ ಟಿವಿ ದೂರಾವಣಿ ಮೂಲಕ ಸಂಪರ್ಕಿಸಿತ್ತು. ಈ ವೇಳೆ ಮಾತನಾಡಿದ ರೂಪಾ ಮೇಡಂ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಮಾಂಸ ಪ್ರಿಯರೇ ಹುಷಾರ್…! ಮಟನ್ ತಿಂದ್ರೆ ಮಟಾಷ್ .. ಇದು ನಿಮ್ಮ ಪವರ್ ಟಿವಿಯ ರಹಸ್ಯ ಕಾರ್ಯಾಚರಣೆ
Posted by Powertvnews on Wednesday, 22 July 2020
ಕುರಿ ಮೇಕೆ ತಲೆ, ಬೋಟಿ ಎಲ್ಲವೂ ಅರ್ಧ ರೇಟ್ ಗೆ ಲಭ್ಯ..! : ಈ ಕುರಿ ಅಥವಾ ಮೇಕೆ ತಲೆಯನ್ನ ಬೆಂಗಳೂರು ಹೊರತು ಪಡಿಸಿ ಬೇರೆ ಕಡೆ ಖರೀದಿ ಮಾಡಬೇಕಾದ್ರೆ 500ರಿಂದ 600 ರೂಪಾಯಿಯಾಗುತ್ತೆ. ಒಂದು ಕುರಿ ಕಾಲಿಗೆ 10ರಿಂದ 20 ರೂಪಾಯಿ ಕೊಟ್ರೆ ಸಾಕು ಪಟ್ ಅಂತ ಗ್ರಾಹಕರ ಕೈ ಸೇರುತ್ತೆ. ಇದ್ರ ನಡುವೆ 250ರಿಂದ 300 ರೂಪಾಯಿಗೆ ಒಂದು ತಲೆ, 100 ರೂಪಾಯಿಗೆ 3 ಕಾಲು ಸಿಗುತ್ತಿದೆ. ಇಷ್ಟಿದ್ರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕಡಿಮೆ ಬೆಲೆ ಅಂದ್ರೆ ಸಾಕು ಹಿಂದೆ ಮುಂದೆ ನೊಡದೇ ಕೊಂಡುಕೊಳ್ತಾರೆ.. ಸದ್ಯ ಪವರ್ ಟಿವಿ ದಂಧೆಯ ಕರಾಳ ಮುಖವನ್ನ ಬಯಲಿಗೆಳೆದಿದೆ.. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆಲ್ಲಾ ಬ್ರೇಕ್ ಹಾಕ್ತಾರಾ ಅಂತಾ ಕಾದುನೋಡಬೇಕಿದೆ. ಆದ್ರೆ ಪವರ್ ಟಿವಿ ಮಾತ್ರ ಇದರ ಫಾಲೋಅಪ್ ಮಾಡ್ತಾನೆ ಇರುತ್ತೆ.
ಪವರ್ ಟಿವಿ ಕಾರ್ಯಾಚರಣೆ ಫಲಶ್ರುತಿ – ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ-Power@3PM
Posted by Powertvnews on Wednesday, 22 July 2020